Select Your Language

Notifications

webdunia
webdunia
webdunia
webdunia

ನನಗೆ ನನ್ನದೇ ಆದ ಕ್ಷೇತ್ರವಿದೆ, ಬೇರೆ ಕಡೆ ಸ್ಪರ್ಧಿಸಲ್ಲ: ಸಿಎಂ ಸ್ಪಷ್ಟನೆ

ನನಗೆ ನನ್ನದೇ ಆದ ಕ್ಷೇತ್ರವಿದೆ, ಬೇರೆ ಕಡೆ ಸ್ಪರ್ಧಿಸಲ್ಲ: ಸಿಎಂ ಸ್ಪಷ್ಟನೆ
ಬೆಂಗಳೂರು , ಮಂಗಳವಾರ, 19 ಸೆಪ್ಟಂಬರ್ 2017 (16:43 IST)
ನನಗೆ ನನ್ನದೇ ಆದ ಕ್ಷೇತ್ರವಿದೆ. ಉತ್ತರ ಕರ್ನಾಟಕ ಸೇರಿದಂತೆ ಬೇರೆ ಕಡೆ ಸ್ಪರ್ಧಿಸಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಉತ್ತರಕರ್ನಾಟಕದಲ್ಲಿ ಸ್ಪರ್ಧಿಸಲು ಒತ್ತಡವಿದೆ ಎನ್ನುವ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ನನ್ನ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತೇನೆ. ಇತರ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಯಾವುದೇ ಇರಾದೆ ಹೊಂದಿಲ್ಲ ಎಂದು ಉತ್ತರ ಕರ್ನಾಟಕದಲ್ಲಿ ಸ್ಪರ್ಧೆಯ ಬಗ್ಗೆ ತೆರೆ ಎಳೆದಿದ್ದಾರೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಸ್ಪರ್ಧಿಸಲು ಕ್ಷೇತ್ರವಿಲ್ಲ. ಆದ್ದರಿಂದ ಬೇರೆ ಕ್ಷೇತ್ರಗಳನ್ನು ಹುಡುಕಿಕೊಂಡು ಹೊರಟಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.
 
ಕೇಂದ್ರ ಸರಕಾರ ಐಟಿ ಇಲಾಖೆ, ಸಿಬಿಐ, ಜಾರಿ ನಿರ್ದೇಶನಾಲಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯ ಸರಕಾರ ಅಂತಹ ಕೃತ್ಯಗಳಲ್ಲಿ ತೊಡಗುವುದಿಲ್ಲ. ನಾವು ಯಾವುದೇ ಫೋನ್ ಕದ್ದಾಲಿಕೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನೇಪಾಳದ ಫೋಖ್ರಾದಲ್ಲಿ ಪತ್ತೆಯಾದ ಹನಿಪ್ರೀತ್: ಪೊಲೀಸ್