Webdunia - Bharat's app for daily news and videos

Install App

14 ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ, ಇನ್ನೆಷ್ಟು ಚುನಾವಣೆಯಲ್ಲಿ ಸ್ಪರ್ಧಿಸಲಿ: ಶರದ್ ಪವಾರ್‌

Sampriya
ಮಂಗಳವಾರ, 5 ನವೆಂಬರ್ 2024 (17:27 IST)
Photo Courtesy X
ಮುಂಬೈ: ಭವಿಷ್ಯದಲ್ಲಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವಿಲ್ಲ ಎಂದು ಹೇಳುವ ಮೂಲಕ ಎನ್‌ಸಿಪಿ, ಎಸ್‌ಪಿ ಮುಖ್ಯಸ್ಥ ಶರದ್ ಪವಾರ್ ಅವರು ರಾಜಕೀಯ ನಿವೃತ್ತಿಯ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ.

ಮೊಮ್ಮಗ ಯುಗೇಂದರ ಪವಾರ್‌ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ, ಮಾತನಾಡುವ ವೇಳೆ ರಾಜ್ಯಸಭಾ ಅಧಿಕಾರಾವಧಿ ಮುಗಿದ ನಂತರ ಸಂಸದೀಯ ಸ್ಥಾನದಲ್ಲಿ ಉಳಿಯಬೇಕೇ? ಬೇಡವೇ? ಎನ್ನುವುದರ ಬಗ್ಗೆ ಯೋಚಿಸುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನಾನು ಅಧಿಕಾರದಲ್ಲಿ ಇಲ್ಲ, ರಾಜ್ಯಸಭೆಯಲ್ಲಿ ಇದ್ದೇನೆ. ರಾಜ್ಯಸಭಾ ಅಧಿಕಾರಾವಧಿ ಇನ್ನು ಒಂದೂವರೆ ವರ್ಷ ಬಾಕಿ ಇದೆ. ಇದುವರೆಗೆ ನಾನು 14 ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಇನ್ನು ಎಷ್ಟು ಚುನಾವಣೆಯಲ್ಲಿ ಸ್ಪರ್ಧಿಸಲಿ? ಹೊಸ ಪೀಳಿಗೆಗೆ ಅವಕಾಶ ನೀಡಬೇಕಿದೆ ಎಂದು ಹೇಳಿದರು.

ಅಧಿಕಾರ ತೊರೆದರು ಜನಸೇವೆ ಮಾಡುವುದನ್ನು ನಾನು ಬಿಡುವುದಿಲ್ಲ. ಸಾಮಾಜಿಕ ಸೇವೆಗೆ ಚುನಾವಣೆಯ ಅಗತ್ಯವಿಲ್ಲ ಎಂದರು.


<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಸ್ಲಿಂ ಯುವಕನ ಹತ್ಯೆ ಪ್ರಕರಣ: ದ.ಕನ್ನಡ ಜಿಲ್ಲೆಯಲ್ಲಿ ಮೂರು ದಿನ ನಿಷೇಧಾಜ್ಞೆ

Operation Sindoor: ಐಪಿಎಲ್‌ ಫೈನಲ್‌ನಲ್ಲಿ ಗೌರವಕ್ಕೆ ಒಳಗಾಗುವ ಮೂವರು ದೇಶದ ಅಧಿಕಾರಿಗಳು ಇವರೇ

ರಾಜ್ಯದಲ್ಲಿ ಕೊತ್ವಾಲ್‌ ಶಿಷ್ಯಂದಿರು ವಿಜೃಂಭಿಸುತ್ತಿದ್ದಾರೆ: ಜೆಡಿಎಸ್‌

ಪಾಕಿಸ್ತಾನ ಪರ ಬೇಹುಗಾರಿಕೆ: ಪಾಕ್‌ರೊಂದಿಗಿನ ಜ್ಯೋತಿ ಮಲ್ಹೋತ್ರಾ ಲಿಂಗ್ ಕೇಳಿದ್ರೆ ದಂಗಾಗ್ತೀರಾ

ಕನ್ನಡ ಭಾಷೆಗೆ ಅಪಮಾನ ಮಾಡದಿರಿ, ಇದನ್ನು ಸಹಿಸಲು ಅಸಾಧ್ಯ: ಸಿಟಿ ರವಿ

ಮುಂದಿನ ಸುದ್ದಿ
Show comments