Select Your Language

Notifications

webdunia
webdunia
webdunia
webdunia

ಟಿಕೆಟ್​ ಬದಲಾವಣೆ ಬಗ್ಗೆ ಮೊದಲೇ ತಿಳಿಸಿದ್ದೆ

ಟಿಕೆಟ್​ ಬದಲಾವಣೆ ಬಗ್ಗೆ ಮೊದಲೇ ತಿಳಿಸಿದ್ದೆ
ಮಂಡ್ಯ , ಗುರುವಾರ, 20 ಏಪ್ರಿಲ್ 2023 (19:05 IST)
ಮಂಡ್ಯದಲ್ಲಿ ಶಾಸಕ ಶ್ರೀನಿವಾಸ್​​ಗೆ ಘೋಷಿಸಿದ್ದ ಜೆಡಿಎಸ್​ ಟಿಕೆಟ್ ಬದಲಾಯಿಸಿ, ಮನ್ಮುಲ್​ ಅಧ್ಯಕ್ಷ ರಾಮಚಂದ್ರುಗೆ ಟಿಕೆಟ್ ನೀಡಲಾಗಿದೆ.. ಈ ಹಿನ್ನೆಲೆಯಲ್ಲಿ ಶಾಸಕ ಎಂ.ಶ್ರೀನಿವಾಸ್ ಅಂಡ್ ಟೀಂ ಬಂಡಾಯ ವೆದ್ದಿದ್ದು, ಇದಕ್ಕೆ ಮಾಜಿ ಸಿಎಂ H.D. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.. ಮಂಡ್ಯದಲ್ಲಿ ಮಾತನಾಡಿದ ಅವರು, ಶ್ರೀನಿವಾಸ್​​ಗೆ ಗೌರವಯುತವಾಗಿ ನಡೆಸಿಕೊಳ್ಳಬೇಕು ಅಂತ ಟಿಕೆಟ್ ಕೊಟ್ಟಿದ್ದೆ. ಅಲ್ಲಿ ಬದಲಾಯಿಸುತ್ತೇನೆ ಅಂತ ಮೊದಲೇ ತಿಳಿಸಿದ್ದೆ, ಮಂಡ್ಯದಲ್ಲಿ ಐದಾರು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ರು. ಈಗ ನಾಲ್ಕು ಜನ ಒಗ್ಗಟ್ಟಾಗಿ ಕೈ ಹಿಡ್ಕೊಂಡಿರೋ ಫೋಟೊ ನೋಡ್ದೆ, ಮೊದಲೇ ಈ ರೀತಿ ಒಗ್ಗಟ್ಟಾಗಿದ್ದಿದ್ರೆ ಅವರಲ್ಲೇ ಒಬ್ಬರಿಗೆ ಟಿಕೆಟ್ ನೀಡ್ತಿದ್ದೆ ಎಂದು ತಿಳಿಸಿದ್ರು.. ಬಂಡಾಯ ಶಮನಕ್ಕಾಗಿ HDK ಸ್ಪರ್ಧೆಗೆ ಕಾರ್ಯಕರ್ತರು ಒತ್ತಾಯಿಸಿದ ವಿಚಾರ ಕುರಿತು HDK ಪ್ರತಿಕ್ರಿಯಿಸಿ, ನಾನು ಎರಡು ಮೂರು ಕಡೆ ನಿಲ್ಲಲು ಆಗಲ್ಲ. ಚನ್ನಪಟ್ಟಣದಲ್ಲಿ ಮಾತ್ರ ಈಗ ಸ್ಪರ್ಧೆ ಮಾಡ್ತಿದ್ದೀನಿ. ಎಲ್ಲಾ ಭಾಗದಲ್ಲೂ ಸ್ಪರ್ಧೆಗೆ ಒತ್ತಾಯ ಇದೆ ಎಂದು ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಆನ್​​ಲೈನ್​​ನಲ್ಲಿ ಪ್ರಧಾನಿ ಮೋದಿ ಪ್ರಚಾರ