Select Your Language

Notifications

webdunia
webdunia
webdunia
webdunia

ಕಾವೇರಿ ಬೇಡ, ಕೃಷ್ಣೆಯೂ ಬೇಡ, ನಮ್ದೆ ನಮಗಾಗಿದೆ: ಈಶ್ವರಪ್ಪ

ಕಾವೇರಿ ಬೇಡ, ಕೃಷ್ಣೆಯೂ ಬೇಡ, ನಮ್ದೆ ನಮಗಾಗಿದೆ: ಈಶ್ವರಪ್ಪ
ಬೆಂಗಳೂರು , ಬುಧವಾರ, 28 ಸೆಪ್ಟಂಬರ್ 2016 (11:49 IST)
ಕಾವೇರಿ ಬೇಡ, ಕೃಷ್ಣೆಯೂ ಬೇಡ, ನಮ್ದೆ ನಮಗಾಗಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಗೊಣಗಿ ಹೊರಟು ಹೋದ ಘಟನೆ ನಡೆದಿದೆ.
 
ಕೇಶವಕೃಪಾದಲ್ಲಿ ನಡೆದ ಆರೆಸ್ಸೆಸ್ ಸಭೆಯಲ್ಲಿ ಹಿಂದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲು ಮುಂದಾದ ಈಶ್ವರಪ್ಪರಿಗೆ, ಆರೆಸ್ಸೆಸ್ ನಾಯಕರು ಈ ಬಗ್ಗೆ ಚರ್ಚೆ ಬೇಡ ಎಂದಿದ್ದಾರೆ.
 
ಹಿಂದ ಸಭೆ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಆರೆಸ್ಸೆಸ್ ನಾಯಕರು, ನಮ್ಮ ಬಳಿ ಈ ವಿಚಾರಗಳನ್ನು ತರಬೇಡಿ, ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿ ನಿಮ್ಮ ಅಸಮಾಧಾನವನ್ನು ಬಗೆಹರಿಸಿಕೊಳ್ಳಿ ಎಂದು ಸೂಚಿಸಿದ್ದಾರೆ.
ಅಕ್ಟೋಬರ್ 3 ರಂದು ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಸಾಧ್ಯತೆಯಿದೆ ಎನ್ನಲಾಗಿದೆ.
 
ಸಭೆಯ ಬಳಿಕ ಕೇಶವಕೃಪದಿಂದ ಹೊರಬಂದ ಈಶ್ವರಪ್ಪ ಮುಖದಲ್ಲಿ ನಿರಾಶಾಭಾವ ಎದ್ದುಕಾಣುತ್ತಿತ್ತು. ಸಭೆ ಮುಗಿಸಿ ಹೊರಬಂದ ಈಶ್ವರಪ್ಪ ಕಾವೇರಿ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
 
ಕಾವೇರಿಯೂ ಬೇಡ ,ಕೃಷ್ಣನೂ ಬೇಡ, ನಮ್ದೆ ನಮಗಾಗಿದೆ ಎಂದು ಈಶ್ವರಪ್ಪ ಹೊರಟುಹೋಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಘೋರ: ಗಂಡು ಬೇಕೆಂಬ ವ್ಯಾಮೋಹ ಇದನ್ನೆಲ್ಲ ಮಾಡಿಸತ್ತಾ?