Daily Horoscope
✕

ನನಗೆ ನಾನೇ ಹೈಕಮಾಂಡ್‌ , ನನಗೆ ಯಾವುದೇ ಪಕ್ಷವಿಲ್ಲ: ಯುಟಿ ಖಾದರ್‌

ಸಂಪ್ರಿಯ
ಮಂಗಳವಾರ, 2 ಜೂನ್ 2026 (14:47 IST)
ಮಂಗಳೂರು: ವಿಧಾನಸಭಾಧ್ಯಕ್ಷರಿಗೆ ಯಾವ ಹೈಕಮಾಂಡ್‌ ಕೂಡಾ ಇಲ್ಲ. ನನಗೆ ನಾನೇ ಹೈಕಮಾಂಡ್‌ ಆಗಿರುವುದರಿಂದ ಸದ್ಯಕ್ಕೆ ನನಗೆ ಯಾವುದೇ ಪಕ್ಷ  ಎಲ್ಲ ಎಂದು ವಿಧಾನ ಸಭಾಧ್ಯಕ್ಷ ಯುಟಿ ಖಾದರ್ ಮಂಗಳವಾರ ಹೇಳಿದರು. 

ಸಚಿವ ಸ್ಥಾನ ಗಿಟ್ಟಿಸಲು ಪಕ್ಷದ ಹೈಕಮಾಂಡ್‌ ಭೇಟಿಯಾಗಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಈ ಹಿಂದೆ ಸರ್ಕಾರ ರಚನೆಯಾಗುವಾಗಲೂ ಸಚಿವ ಸ್ಥಾನಕ್ಕೆ ನನ್ನ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ನಾನು ವಿಧಾನಸಭಾಧ್ಯಕ್ಷನಾದೆ. ಈಗಲೂ ಅದೇ ಹುದ್ದೆಯಲ್ಲಿರುವುದಿರಂದ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಸದ್ಯಕ್ಕೆ ಪಕ್ಷದ ವಿಚಾರವೇ ನನ್ನ ತಲೆಯಲ್ಲಿ ಇಲ್ಲ. ಆ ಬಗ್ಗೆ ಆಲೋಚನೆ ಮಾಡಲು ಹೋಗುವುದಿಲ್ಲ ಎಂದು ಹೇಳಿದರು.

ಇನ್ನೂ ಸ್ಪೀಕರ್ ಆಗಿರುವ ಕಾರಣ ಸಿಎಂ ಅವರ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ವೇದಿಕೆಯ ಮೇಲೆ ಇರುತ್ತೇನೆ. ಒಂದು ವೇಳೆ ಮಂತ್ರಿಯಾದರೂ ವೇದಿಕೆ ಏರಬಹುದು. ಕೇವಲ ಶಾಸಕನಾದರೆ ವೇದಿಕೆ ಮುಂದುಗಡೆ ಕುಳಿತುಕೊಳ್ಳಬೇಕು ಅಷ್ಟೆ. ಸಚಿವನಾಗುತ್ತೇನೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಬೇಕಾದ ಪ್ರಮೇಯ ಎದುರಾದರೆ, ಉಪಸಭಾಧ್ಯಕ್ಷರಿಗೆ ಅಥವಾ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಅವರಿಗೆ ಸಲ್ಲಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. 

ಸಚಿವ ಸ್ಥಾನದ ವಿಚಾರದಲ್ಲಿ ಜಮೀರ್ ಅಹಮದ್‌ ಖಾನ್‌ಗೂ ನನಗೂ ಯಾವುದೇ ಪೈಪೋಟಿ ಇಲ್ಲ. ನಾವಿಬ್ಬರೂ ಪರಸ್ಪರ ಚೆನ್ನಾಗಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಶಾ ಕಾರ್ಯಕರ್ತೆಯರನ್ನು ಭೇಟಿಯಾದ ಬಳಿಕ ರಮ್ಯಾ ಅಚ್ಚರಿಯ ಟ್ವೀಟ್

ಬೆಂಗಳೂರನ್ನು ಜಪಾನ್ ಥರಾ ಡೆವಲಪ್ ಮಾಡ್ತೀವಿ: ಜಪಾನ್ ಪ್ರವಾಸದಲ್ಲಿ ಸಿಎಂ ಡಿಕೆ ಶಿವಕುಮಾರ್ ಪ್ಲ್ಯಾನ್

ಯುವತಿಯನ್ನು 3 ನೇ ಮಹಡಿಯಿಂದ ತಳ್ಳಿ ಹತ್ಯೆಗೈದ ಪ್ರಿಯಕರ: ಸಿಸಿಟಿವಿಯಲ್ಲಿ ಬಯಲಾಯ್ತು ಭಯಾನಕ ಕೃತ್ಯ Video

Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಇಂದು ಗುಡುಗು ಸಹಿತ ಮಳೆ ಎಚ್ಚರಿಕೆ

ಸುಪ್ರೀಂಕೋರ್ಟ್ ಆದೇಶವನ್ನೂ ಧಿಕ್ಕರಿಸಿದ ಸಿಎಂ ಜೊಸೆಫ್ ವಿಜಯ್ ಸರ್ಕಾರ: ಕಾರ್ತಿಕ ದೀಪಂ ಬೆಳಗದ್ದಕ್ಕೆ ಹಿಂದೂಗಳ ಆಕ್ರೋಶ Video

ಮುಂದಿನ ಸುದ್ದಿ
Show comments