Select Your Language

Notifications

webdunia
webdunia
webdunia
webdunia

ಮಹಿಳೆಯರಿಗೆ 2 ಸಚಿವ ಸ್ಥಾನ ನೀಡಲು ಸಿದ್ಧ: ಸಿಎಂ ಸಿದ್ದರಾಮಯ್ಯ

ಮಹಿಳೆಯರಿಗೆ 2 ಸಚಿವ ಸ್ಥಾನ ನೀಡಲು ಸಿದ್ಧ: ಸಿಎಂ ಸಿದ್ದರಾಮಯ್ಯ
ಬೆಂಗಳೂರು , ಮಂಗಳವಾರ, 11 ಏಪ್ರಿಲ್ 2017 (16:18 IST)
ಸಂಪುಟ ವಿಸ್ತರಣೆಯಲ್ಲಿ 2 ಸಚಿವ ಸ್ಥಾನಗಳನ್ನ ಮಹಿಳೆಯರಿಗೆ ನೀಡಲು ಸಿದ್ಧವಿದ್ದೇನೆ, ಇದರಿಂದ ಅಸಮಾಧಾನಗೊಳ್ಳುವ ಪುರುಷರನ್ನ ನೀವು ಸಮಾಧಾನ ಮಾಡಬೇಕೆಂದು  ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನೂ ಸಹ ಮಹಿಳೆಯರ ಪರ, ಎಲ್ಲ ವಲಯದಲ್ಲೂ ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕೆಂದು ನಂಬಿದವನು, ಪ್ರತಿಪಾದಿಸುತ್ತಿರುವವನು ಎಂದು ಹೇಳಿದರು. ಸಿಎಂ ಮಾತಿಗೆ ಪ್ರತಿಕ್ರಿಯಿಸಿದ ಉಪಸ್ಥಿತರೊಬ್ಬರು ನಿಮ್ಮ ಸಂಪುಟದಲ್ಲಿ ಇಬ್ಬರು ಮಹಿಳೆಯರಿಗೆ ಸಚಿವ ಸ್ಥಾನ ನಿಡಿ ಎಂದು ಕೇಳಿದ್ದಾರೆ.

ಈ ಮಾತಿಗೆ ಉತ್ತರಿಸಿದ ಸಿಎಂ, ಮಹಿಳೆಯರಿಗೆ 2 ಸಚಿವ ಸ್ಥಾನ ನೀಡಲು ನಾನು ಸಿದ್ಧ. ಆದರೆ, ಇದರಿಂದ ಅಸಮಾಧಾನಗೊಳ್ಳುವ ಪುರುಷರನ್ನ ನೀವು ಸಮಾಧಾನಪಡಿಸಬೇಕು ಎಂದು ಸಿಎಂ ಹೇಳಿದರು.

ಉಪಚುನಾವಣಾ ರಣಕಣದಿಂದ ಬಂದಿರುವ ಸಿಎಂ ಏಪ್ರಿಲ್ 13ರ ಉಪಚುನಾವಣಾ ಫಲಿತಾಂಶದ ಬಳಿಕ ಸಂಪುಟ ವಿಸ್ತರಣೆಗೆ ಕೈಹಾಕುವ ಸಾಧ್ಯತೆ ಇದ್ದು, ಖಾಲಿ ಇರುವ 2 ಸಚಿವ ಸ್ಥಾನ ಭರ್ತಿ ಮಾಡಲಿದ್ದಾರೆ ಎನ್ನಲಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಗೆ ನಿರಾಕರಿಸಿದ ಯುವತಿಯನ್ನ ಚಾಕುವಿನಿಂದ ಚುಚ್ಚಿ ಕೊಂದ ಪಾಗಲ್ ಪ್ರೇಮಿ