ಗೀತಾ ಜಯಂತಿ ಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತೋಷ ಆಗ್ತಾ ಇದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.ಜನಪ್ರಿಯ ನಾಯಾಕರು ಕೇಂದ್ರ ಸಚಿವರು ಬಂದಿರುವುದು ತುಂಬಾ ಸಂತೋಷ.ಅತ್ಯಂತ ಶ್ರೇಷ್ಠ ಗ್ರಂಥ ಭಗವದ್ಗೀತೆ.ಎಲ್ಲಾ ಧರ್ಮ ಗ್ರಂಥಗಳು ವಿಭಿನ್ನವಾಗಿವೆ.ಆದರೆ ಎಲ್ಲಾ ಗ್ರಂಥ ಗಳ ಸಾರ ಮಾತ್ರ ಒಂದೆ ಮಾನವನ ಅಭಿವೃದ್ಧಿಯನ್ನು ಹೊಂದಿದೆ.ಕುರುಕ್ಷೇತ್ರ ಬದುಕನ್ನ ತಿಳಿಯುವಂತ ಬದುಕನ್ನು ನಡೆಸುವಂತ ಸಂಕ್ರಮಣ ಕಾಲ.ಬದುಕು ಅಂದ್ರೆ ಏನು ,ಪಾಪ ಅಂದ್ರೆ ಏನು ಕರ್ಮ ಅಂದರೆ ಏನು ಇದೆಲ್ಲ ಭಗವದ್ಗೀತೆಯಲ್ಲಿ ಇದೆ.ಯಾವುದಾದರೂ ಸಮಸ್ಯೆ ಯಲ್ಲಿ ಇದ್ದಾಗ ಭಗವದ್ಗೀತೆಯ ನ್ನು ಓದಿ ಅದಕ್ಕೆ ತಪ್ಪದೇ ಪರಿಹಾರ ಸಿಗುತ್ತೆ.ನಾನು ಸಹ ಯಾವುದಾದರೂ ಸಮಸ್ಯೆ ಯಲ್ಲಿದ್ದರೆ ಭಗವದ್ಗೀತೆಯನ್ನು ಓದುತ್ತೆನೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.