Select Your Language

Notifications

webdunia
webdunia
webdunia
webdunia

ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ

I am also a ministerial aspirant
bangalore , ಮಂಗಳವಾರ, 16 ಮೇ 2023 (20:00 IST)
ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಸಕ ವಿನಯ್ ಕುಲಕರ್ಣಿ ಸಚಿವ ಸ್ಥಾನದ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಕರುನಾಡಿನ ಮುಖ್ಯಮಂತ್ರಿ ಸ್ಥಾನಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ KPCC ಅಧ್ಯಕ್ಷ D.K ಶಿವಕುಮಾರ್​ ನಡುವೆ ಜಟಾಪಟಿ ಶುರುವಾಗಿದೆ. AICC ವೀಕ್ಷಕರು ಹಲವು ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ವಿನಯ್ ಕುಲಕರ್ಣಿ, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ ಇಬ್ಬರೂ ನಮ್ಮವರೇ, ನಮ್ಮ ನಾಯಕರೇ. ಇಬ್ಬರೂ ಸೇರಿ ಪಕ್ಷ ಕಟ್ಟಿದ್ದಾರೆ. ಹಾಗಾಗಿ ಇಬ್ಬರಿಗೂ ಅವಕಾಶ ಸಿಗಬೇಕು. ಸಿಎಂ ಆಯ್ಕೆ ಬಗ್ಗೆ ಹೈಕಮಾಂಡ್​​ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ರು.. ನಾವು ಯಾವ ಗುಂಪಿನಲ್ಲೂ ಇಲ್ಲದವರು. ನಾನು ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ, ಒಂದು ಬಾರಿ ಪಕ್ಷೇತರನಾಗಿ ಕೆಲಸ ಮಾಡಿದ್ದೇನೆ. ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಮುಂದೆ ನೋಡೋಣ ಏನಾಗಲಿದೆ ಎಂದು ಹೇಳುವುದರ ಮೂಲಕ ಸಚಿವ ಸ್ಥಾನದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೈದ್ದಾಂತಿಕ ಹೋರಾಟ ಮುಂದುವರೆಸ್ತೇವೆ: ಸಿಟಿ ರವಿ