ನಾನು ಮಹಾಕಾಳಿಯ ಆರಾಧಕಿ; ಯಾರೊಂದಿಗೂ ಅನೈತಿಕ ಸಂಬಂಧ ಇಟ್ಟುಕೊಂಡಿಲ್ಲ ಎಂದವಳಾರು?

Webdunia
ಸೋಮವಾರ, 17 ಡಿಸೆಂಬರ್ 2018 (14:16 IST)
ನಾನು ಶ್ರೀ ಮಾತೆ ಮಹಾಕಾಳಿ ದೇವಿಯ ಆರಾಧಕಿ ಹಾಗೂ ನಾನೊಬ್ಬಳು ಕಟ್ಟಾ ಸನ್ಯಾಸಿನಿ. ಆದರೆ ಇತ್ತೀಚಿಗೆ ಕೆಲವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಮಾಜಿ ಸಚಿವ  ವಿನಯ ಕುಲಕರ್ಣಿ ಹಾಗೂ ಮುರುಘಾಮಠದ ಶಿವಯೋಗಿ ಸ್ವಾಮಿಗಳ ಜೊತೆ ಅನೈತಿಕ ಸಂಬಂಧ ಇದೆ ಎಂಬುದು ಶುದ್ಧ ಸುಳ್ಳು ಎಂದು ಕರ್ನಾಟಕ ಕೃಷಿಕ ಮತ್ತು ಕೃಷಿ ಕೂಲಿ ಕಾರ್ಮಿಕ ಹಿತರಕ್ಷಣಾ ಸಮಿತಿಯ ಸಂಚಾಲಕರಾದ ವಿಜಯಲಕ್ಷ್ಮಿ ಸುಳ್ಳೋಳ್ಳಿ ಹೇಳಿದರು.

ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕ ವಯಸ್ಸಿನಲ್ಲಿಯೇ ನಾನು ಸಂನ್ಯಾಸವನ್ನು ಹೊಂದಿದ್ದು, ಮಹಾಕಾಳಿಯನ್ನು ಆರಾಧನೆ ಮಾಡುತ್ತಾ ಬಂದಿದ್ದೇನೆ.  ಆದರೆ ಕೆಲ ಕಿಡಿಗೇಡಿಗಳು ನನ್ನ ಬಗ್ಗೆ ಕರಪತ್ರ ಹಂಚುತ್ತಿದ್ದಾರೆ. ಶಿವಯೋಗಿ ಸ್ವಾಮಿಗಳು ನನ್ನ ತಂದೆಯ ಸಮಾನರು. ನಾನು ಯಾರೊಂದಿಗೂ ಅನೈತಿಕ ಸಂಬಂಧವನ್ನು ಹೊಂದಿಲ್ಲ.

ನಾನು ನನ್ನ ಬುದ್ದಿಮಾಂದ್ಯ ತಮ್ಮ ಹಾಗೂ ಸಾಕು ಮಗಳೊಡನೆ ಜೀವನ ಸಾಗಿಸುತ್ತಿದ್ದೇನೆ ಹೊರತು ಅವರು ನನ್ನ ಮಕ್ಕಳಲ್ಲ. ಆದರೆ ಕೆಲವರು ತಮ್ಮ ಹಾಗೂ ಸಾಕು ಮಗಳನ್ನೇ ನನ್ನ ಹಾಗೂ ಶಿವಯೋಗಿ ಸ್ವಾಮೀಜಿಯ ಮಕ್ಕಳು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ಇದರಿಂದ ನನಗೆ ಮಾನಸಿಕ ಹಿಂಸೆ   ಆಗುತ್ತಿದೆ. ಹೀಗಾಗಿ ನನಗೆ ನ್ಯಾಯ ಒದಗಿಸಬೇಕು ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳದಲ್ಲಿ ಮೊದಲ ಬಾರಿಗೆ ಗೆಲುವಿಗೆ ಪ್ರಧಾನಿ ಮೋದಿಗೆ ಖುಷಿಯೋ ಖುಷಿ

ಜನವರಿ 6 ಕ್ಕೆ ಡಿಕೆ ಶಿವಕುಮಾರ್ ಸಿಎಂ: ಇಕ್ಬಾಲ್ ಹುಸೇನ್ ಮಾತಿಗೆ ಡಿಕೆಶಿ ಹೇಳಿದ್ದೇನು

ತಿರುವನಂತಪುರಂನಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು

ಕಾಂಗ್ರೆಸ್ಸಿಗೆ ಯತೀಂದ್ರ ಹೈಕಮಾಂಡ್ ಆಗಿದ್ದಾರಾ: ವಿಜಯೇಂದ್ರ

ಡಿಕೆ ಶಿವಕುಮಾರ್ ಸಿಎಂ ಆಗುವ ದಿನಾಂಕ ಫಿಕ್ಸ್: ಸ್ಪೋಟಕ ಹೇಳಿಕೆ ನೀಡಿದ ಆಪ್ತ ಶಾಸಕ

ಮುಂದಿನ ಸುದ್ದಿ
Show comments