ಸಿಗ್ನಲ್ ದಾಟಿದ್ದನ್ನ ತಡೆದಿದ್ದೇ ತಪ್ಪಾಯ್ತು.. ಮಹಿಳೆಯೊಬ್ಬರು ಎಎಸ್ಐ ಮೇಲೆ ಹಲ್ಲೆ ನಡೆಸಿರುವ ಘಟನೆ ಇಂದಿರಾನಗರದ ಬಿಎಂಸಿ ಸರ್ಕಲ್`ನಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ ಮಹಿಳೆಯೊಬ್ಬರು ಬಿಎಂಸಿ ಸರ್ಕಲ್`ನಲ್ಲಿ ಸಿಗ್ನಲ್ ಜಂಪ್ ಮಾಡಿದ್ದಾರೆ. ಈ ಸಂದರ್ಭ ಎಎಸ್ಐ ತಡೆದಿದ್ದಕ್ಕೆ ಆಂಧ್ರ ಪೊಲೀಸರು ಹೀಗೆ ಮಾಡುವುದಿಲ್ಲ ಎಂದು ಜಗಳ ತೆಗೆದ ಹೈದ್ರಾಬಾದ್ ಮೂಲದ ಮಹಿಳೆ ಎಎಸ್ಐ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಆರೋಪಿಸಲಾಗಿದೆ. ಬಳಿಕ ಮಧ್ಯಸ್ಥಿಕೆಗೆ ಬಂದ ಪ್ರದೀಪ್ ಎಂಬಾತನು ಪೊಲೀಸ್ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದ್ದು, ಇಬ್ಬರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.
ಇಂದಿರಾನಗರ ಪೊಲೀಸ್ ಟಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆ ಮತ್ತು ಪ್ರದೀಪ್ ಇಬ್ಬರನ್ನೂ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಇತ್ತೀಚೆಗೆ ಹೊರ ರಾಜ್ಯಗಳಿಂದ ಬಂದವರಿಂದ ಪೊಲಿಸರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು, ಕಠಿಣ ಕ್ರಮ ಜರುಗಿಸಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ