ಸಂಘಟನೆ ಉಳಿಸಿ ಸಮಾವೇಶದಲ್ಲಿ ಯಡಿಯೂರಪ್ಪ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪನವರೇ ಬೇಡ ಬೇಡ ಎಂದು ಬೇಡಿಕೊಂಡರೂ ಕೆಜೆಪಿ ಪಕ್ಷ ಕಟ್ಟಿದರು. ಕಜೆಪಿಯಿಂದಾಗಿ ಬಿಜೆಪಿ 40 ಸ್ಥಾನಕ್ಕಾಗಿ ಕುಸಿದು ಸಿದ್ದರಾಮಯ್ಯ ಲಾಟರಿ ಹೊಡೆದು ಅಧಿಕಾರಕ್ಕೆ ಬಂದರು ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ನಿಷ್ಠಾವಂತ ಕಾರ್ಯಕರ್ತರನ್ನ ನೀವು ಅಮಾನತು ಮಾಡುತ್ತೀರಾ ಯಡಿಯೂರಪ್ಪನವರೇ..? ಕೆಜೆಪಿ ಕಟ್ಟಿದ್ರಲ್ಲಾ ಆಗ ಪಕ್ಷಕ್ಕೆ ದುಡಿದ ಕಾರ್ಯಕರ್ತರಿವರು. ಪಕ್ಷ ಹಾಳಾಗುತ್ತಿದ್ದರೂ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಪಕ್ಷವನ್ನು ಒಡೆಯಲು ಬಿಡಲ್ಲ, ನಾವೆಲ್ಲ ಒಂದುಗೂಡಲು ಇಲ್ಲಿ ಸೇರಿದ್ದೇವೆ. ಪಕ್ಷವನ್ನ ಒಡೆಯಲು ಅಲ್ಲ ಎಂದು ಕಿಡಿ ಕಾರಿದ್ದಾರೆ.
ಯಡಿಯೂರಪ್ಪನವರೇ ನಿಮ್ಮ ಬೆಂಬಲಿಗರ ಮಾತು ಕೇಳುವುದನ್ನ ಬಿಡಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ 40 ಸ್ಥಾನಕ್ಕೆ ಕುಸಿದಿತ್ತು. ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋಗಿದ್ದರಿಂದ 25 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದೆವು. ನಾವೆಲ್ಲರೂ ಒಟ್ಟಾಗಿ ದುಡಿಯಬೇಕು ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ