ಹೆಂಡತಿ ಮೇಲಿನ ಸಿಟ್ಟಿಗೆ ಕಾಲ್ ಗರ್ಲ್ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ಗಂಡ

Krishnaveni K
ಗುರುವಾರ, 11 ಏಪ್ರಿಲ್ 2024 (09:25 IST)
ಬೆಂಗಳೂರು: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆಯಿದೆ. ಆದರೆ ಅದಕ್ಕೂ ಮೀರಿದರೆ ಅನಾಹುತವಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ.

ಪತ್ನಿ ಮೇಲಿನ ಸಿಟ್ಟಿಗೆ ವ್ಯಕ್ತಿಯೊಬ್ಬ ಫೇಸ್ ಬುಕ್ ನಲ್ಲಿ ಆಕೆಯನ್ನು ಕಾಲ್ ಗರ್ಲ್ ಎಂದು ಬರೆದು ಸಂಪರ್ಕಿಸಲು ಫೋನ್ ನಂಬರ್ ಕೊಟ್ಟಿದ್ದಾನೆ. ಸತ್ಯನಾರಾಯಣ ರೆಡ್ಡಿ ಎಂಬಾತ ಆರೋಪಿ. ಆತ ಹಾಗೂ ಆತನ ಪತ್ನಿ ನಡುವೆ ದಾಂಪತ್ಯ ಕಲಹವಿತ್ತು. ಹೀಗಾಗಿ ಇದೇ ಧ‍್ವೇಷದಲ್ಲಿ ಇಂತಹ ಹೇಯ ಕೃತ್ಯವೆಸಗಿದ್ದಾನೆ.

ಈ ಘಟನೆ ಬಗ್ಗೆ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2019 ರಲ್ಲಿ ದಂಪತಿ ಮದುವೆಯಾಗಿದ್ದರು. ಕಳೆದ ಒಂದು ವರ್ಷದಿಂದ ದಂಪತಿ ದೂರವಾಗಿದ್ದಾರೆ. ಪತಿ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದಾನೆ ಎಂದು ಪತ್ನಿ ದೂರವಾಗಿದ್ದಳು. ಇದೇ ಕಾರಣಕ್ಕೆ ಪತ್ನಿಯ ಫೋಟೋವನ್ನು ಕಾಲ್ ಗರ್ಲ್ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ.

ಹೊಸ ಫೇಸ್ ಬುಕ್ ಪೇಜ್ ಕ್ರಿಯೇಟ್ ಮಾಡಿ ಪತ್ನಿಯ ಫೋಟೋ, ದೂರವಾಣಿ ಸಂಖ್ಯೆ ಇತ್ಯಾದಿ ಮಾಹಿತಿ ನೀಡಿದ್ದ. ಇದರಿಂದಾಗಿ ಪತ್ನಿಗೆ ಸಿಕ್ಕಾಪಟ್ಟೆ ಅಶ್ಲೀಲ ಕರೆಗಳು ಬರಲಾರಂಭಿಸಿದ್ದವು. ಇದರಿಂದ ಬೇಸತ್ತ ಆಕೆ ಪೊಲೀಸರಿಗೆ ದೂರ ನೀಡಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೇ ಗುರುವಾರ, ಶುಕ್ರವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಗಲ್ಲ

ಬೆಳಗಾವಿ ಕೃಷ್ಣಮೃಗ ಸಾವು ಪ್ರಕರಣ, ಬಂತು ಪ್ರಯೋಗಾಲಯದ ವರದಿ

60 ಅಡಿ ಆಳದ ಕಾಲುವೆಗೆ ಬಿದ್ದ ಕಾಡಾನೆ, ಕಾರ್ಯಚರಣೆ ಹೇಗೆ ನಡೆದಿತ್ತು ಗೊತ್ತಾ

ಸಹಾಯ ಕೇಳಲು ಬಂದ ಯುವತಿಗೆ ಲೈಂಗಿಕ ದೌರ್ಜನ್ಯ, ಕೋರ್ಟ್‌ಗೆ ಹಾಜರಾಗಲು ಬಿಎಸ್‌ವೈಗೆ ಸಮನ್ಸ್‌

ಸೂಸೈಡ್ ಬಾಂಬರ್ ದಾರಿ ತಪ್ಪಿದ ಮಗ: ಕಾಂಗ್ರೆಸ್ ಸಂಸದನ ಹೇಳಿಕೆ ಕೇಳಿದ್ರೆ ಶಾಕ್

ಮುಂದಿನ ಸುದ್ದಿ
Show comments