Select Your Language

Notifications

webdunia
webdunia
webdunia
webdunia

ಪ್ರಿಯತಮೆ ಪತಿ, ಮೈದುನನಿಂದ ಪ್ರಿಯಕರನ ಹತ್ಯೆ

ಪ್ರಿಯತಮೆ ಪತಿ, ಮೈದುನನಿಂದ ಪ್ರಿಯಕರನ ಹತ್ಯೆ
ಕಲಬುರ್ಗಿ , ಭಾನುವಾರ, 15 ಅಕ್ಟೋಬರ್ 2017 (14:04 IST)
ಕಲಬುರ್ಗಿ: ಪ್ರೇಯಸಿಯನ್ನು ಭೇಟಿ ಮಾಡಲು ಬಂದ ವ್ಯಕ್ತಿಯನ್ನು ಆಕೆಯ ಪತಿ ಮತ್ತು ಮೈದುನ ಸೇರಿ ಹತ್ಯೆ ಮಾಡಿರುವ ಘಟನೆ ಆಜಾದ್ ಪುರ್ ಬಡಾವಣೆಯಲ್ಲಿ ನಡೆದಿದೆ.

ಚಿತ್ತಾಪುರ ಪಟ್ಟಣದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಬಸವರಾಜು (30) ಹತ್ಯೆಯಾದ ಪ್ರೇಮಿ. ಈ ಮೊದಲು ಚಿತ್ತಾಪುರದಲ್ಲಿದ್ದ ಮಹಿಳೆ ಮತ್ತು ಬಸವರಾಜ ಮಧ್ಯೆ ಅಕ್ರಮ ಸಂಭಂದವಿತ್ತು. ಸದ್ಯ ಕಲಬುರ್ಗಿ ನಗರದಲ್ಲಿ ಪತಿಯ ಮನೆಯಲ್ಲಿದ್ದ ಮಹಿಳೆಯನ್ನು ಭೇಟಿಯಾಗಲು ಬಸವರಾಜು ಆಗಾಗ ಬಂದು ಹೋಗುತ್ತಿದ್ದ ಎನ್ನಲಾಗಿದೆ.

ನಿನ್ನೆ ಸಾಯಂಕಾಲ ಸಹ ಮಹಿಳೆಯ ಭೇಟಿಗಾಗಿ ಬಸವರಾಜ ಬಂದಿದ್ದು, ಈ ಬಗ್ಗೆ ಸುಳಿವು ಪಡೆದ ಮಹಿಳೆಯ ಪತಿ ಹಾಗೂ ಮೈದುನ ಸೇರಿ ರಾತ್ರಿ ಕಟ್ಟಿಗೆಯಿಂದ ಹೊಡೆದು ಆತನನ್ನು ಕೊಲೆ ಮಾಡಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಈ ಸಂಬಂಧ ಮಹಾತ್ಮ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯವರಿಗೆ ಕೋಮುವಾದದಲ್ಲಿ ಮಾತ್ರ ನಂಬಿಕೆ: ಸಿಎಂ ಆಕ್ರೋಶ