Publish Date: Mon, 26 Dec 2022 (21:21 IST)
Updated Date: Mon, 26 Dec 2022 (21:24 IST)
ಹಿಂದೂ ಹುಡುಗಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಳು. ಹಿಂದೂ ಧರ್ಮದಿಂದ ಮತಾಂತರವಾಗಿದ್ದ ಉಮಾ ಶರ್ಮಾಳನ್ನು ಆಕೆಯ ಪತಿ ವಾಸಿ ಅಹ್ಮದ್ ಕೊಲೆ ಮಾಡಿ, ಮೃತದೇಹವನ್ನು ಮಣ್ಣಿನಡಿಯಲ್ಲಿ ಹೂತು ಹಾಕಿದ್ದಾನೆ.
ಏಳು ವರ್ಷಗಳ ಹಿಂದೆ ಮುಸ್ಲಿಂ ಯುವಕನೊಂದಿಗೆ ವಿವಾಹವಾದ ಉಮಾ ಶರ್ಮಾ, ನಂತರ ತನ್ನ ಹೆಸರನ್ನು ಅಕ್ಸಾ ಫಾತ್ಮಾ ಬೇಗಂ ಎಂದು ಬದಲಾಯಿಸಿಕೊಂಡಿದ್ದಳು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ಈ ದಂಪತಿ, ಇತ್ತೀಚೆಗೆ ಇಬ್ಬರಲ್ಲೂ ಭಿನ್ನಾಭಿಪ್ರಾಯ ಮೂಡಿತ್ತು. ಇದೀಗ ಉಮಾ ಶರ್ಮಾಳನ್ನು ಕ್ರೂರವಾಗಿ ಥಳಿಸಿದ ವಾಸಿಮ್ ಅಹ್ಮದ್ ನಂತರ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿದ್ದಾನೆ.