Select Your Language

Notifications

webdunia
webdunia
webdunia
webdunia

ಪತ್ನಿಯನ್ನು ಅಸಭ್ಯವಾಗಿ ನೋಡಿದ ನೆರೆಮನೆಯಾತ ಹೆಣವಾದ!

ಪತ್ನಿಯನ್ನು ಅಸಭ್ಯವಾಗಿ ನೋಡಿದ ನೆರೆಮನೆಯಾತ ಹೆಣವಾದ!
ಭೋಪಾಲ್ , ಶುಕ್ರವಾರ, 1 ಜನವರಿ 2021 (08:16 IST)
ಭೋಪಾಲ್ :  ಹೆಂಡತಿಯನ್ನು ಅಸಭ್ಯವಾಗಿ ನೋಡಿದ 45 ವರ್ಷದ ನೆರೆಮನೆಯವನನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿದ ಘಟನೆ ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯ ರಾಮ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.

ಮೃತ ವ್ಯಕ್ತಿ ಯಾವಾಗಲೂ ಪಕ್ಕದ ಮನೆಯಲ್ಲಿದ್ದ ಆರೋಪಿಯ ಪತ್ನಿಯನ್ನುಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ. ಈ ಬಗ್ಗೆ ಪತ್ನಿ ತನ್ನ ಪತಿಗೆ ತಿಳಿಸಿದ್ದಾಳೆ. ಕೋಪಗೊಂಡ ಪತಿ ಆತನಿಗೆ ಎಚ್ಚರಿಕೆ ನೀಡಲು ಆತನ ಮನೆಗೆ ಹೋದಾಗ ಅವರ ನಡುವೆ ಘರ್ಷಣೆ ನಡೆದಿದೆ. ಆ ವೇಳೆ ಆರೋಪಿ ಅಲ್ಲಿದ್ದ ಕೊಡಲಿಯನ್ನು ಎತ್ತಿಕೊಂಡು ಆತನ ಮೇಲೆ ಹಲ್ಲೆ ಮಾಡಿದ್ದಾನೆ, ಇದರ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾನೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೈಟ್ ಕರ್ಪ್ಯೂ ಹಿಂಪಡೆಯಲು ವಿಪಕ್ಷಗಳೇ ಕಾರಣ ಎಂದ ಆರೋಗ್ಯ ಸಚಿವರು