Publish Date: Tue, 10 Jul 2018 (18:01 IST)
Updated Date: Tue, 10 Jul 2018 (18:06 IST)
ಧಾರಾಕಾರ ಮಳೆಯ ಅವಘಡದಿಂದ ಮೂಕ ಪ್ರಾಣಿಯ ಮನಕಲುಕುವ ಘಟನೆ ನಡೆದಿದೆ. ಚರಂಡಿಯಲ್ಲಿ ಕೊಚ್ಚಿ ಹೋಗಿ ಸಾವನ್ನಪಿದ್ದ ನಾಯಿ ಮರಿಗಳಿಗೆ ಅಂತ್ಯ ಸಂಸ್ಕಾರ ಮಾಡಿದ ಪತ್ರಕರ್ತರು ಮಾನವೀಯತೆ ಮೆರೆದಿದ್ದಾರೆ. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಸುಭಾಷನಗರದಲ್ಲಿ ಕಂಡು ಬಂದಿದ್ದು. ಇನ್ನೂ ತಾಲೂಕಿನಾದ್ಯಂತ ಸುರಿದ ಭಾರಿ ಮಳೆಯಿಂದ, ಮರಿ ನಾಯಿಗಳು ಚರಂಡಿಯಲ್ಲಿ ಕೊಚ್ಚಿಹೋಗಿ ತಾಯಿ ನಾಯಿ ರೋಧಿಸುತ್ತಿದ್ದ ಪ್ರಸಂಗ ನಡೆದಿದೆ.
ಈ ವೇಳೆ ನಾಯಿಯ ರೋಧನವನ್ನು ಆಲಿಸಿದ ಪತ್ರಕರ್ತರು ಹಾಗೂ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಒಂದು ನಾಯಿ ಮರಿಯನ್ನೆಷ್ಟೆ ರಕ್ಷಿಸಲು ಸಾದ್ಯವಾಯಿತು. ಅಲ್ಲದೆ ಇನ್ನೂಳಿದ ಮೂರು ನಾಯಿ ಮರಿಗಳು ಚರಂಡಿಯಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿತ್ತು. ಮಳೆಯಲ್ಲಿಯೇ ಮೂರು ನಾಯಿ ಮರಿಗಳನ್ನ ಸುರಿಯುತ್ತಿರುವ ಮಳೆಯಲ್ಲಿಯೇ ಅಂತ್ಯಸಂಸ್ಕಾರ ಮಾಡಿ , ಬದುಕುಳಿದ ನಾಯಿ ಮರಿ ಹಾಗೂ ತಾಯಿ ನಾಯಿಗೆ ಆಹಾರವನ್ನು ನೀಡಿ ಪತ್ರಕರ್ತರು ಹಾಗೂ ತೋಟಗಾರಿಕೆ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.