Select Your Language

Notifications

webdunia
webdunia
webdunia
webdunia

ರಾಜ್ಯಕ್ಕೆ ಚಿತ್ರನಟರ ಕೊಡುಗೆ ಏನು ಎಂದು ವಿವಾದ ಹುಟ್ಟುಹಾಕಿದ ಹುಕ್ಕೇರಿ

ರಾಜ್ಯಕ್ಕೆ ಚಿತ್ರನಟರ ಕೊಡುಗೆ ಏನು ಎಂದು ವಿವಾದ ಹುಟ್ಟುಹಾಕಿದ ಹುಕ್ಕೇರಿ
ಚಿಕ್ಕೋಡಿ , ಸೋಮವಾರ, 3 ಡಿಸೆಂಬರ್ 2018 (14:10 IST)
ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಂಬರೀಶ್, ವಿಷ್ಣುವರ್ಧನ, ರಾಜ್ ಕುಮಾರ್ ಕರ್ನಾಟಕ ಚಿತ್ರ ರಂಗದಲ್ಲಿ ಕೋಟ್ಯಂತರ ಹಣ ಮಾಡಿದ್ದಾರೆ
ರಾಜ್ಯಕ್ಕೆ ಅವರ ಕೊಡುಗೆ ಏನು? ಅಂಥವರಿಗೆ ಸರ್ಕಾರದ ಹಣದಲ್ಲಿ ಸ್ಮಾರಕ ನಿರ್ಮಿಸುವ ಅಗತ್ಯ ಇಲ್ಲ ಎಂದು ಸಮಾಜ ಸೇವಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಿ. ಎಂ. ಹೆಚ್.ಡಿ. ಕುಮಾರಸ್ವಾಮಿ, ರಾಜ್ಯದ ತೆರಿಗೆ ಹಣವನ್ನು ಬೇಕಾಬಿಟ್ಟಿ ಬಳಸಿ ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ರೈತರು ಆತ್ಮಹತ್ಯೆ ಹಾದಿ ತುಳಿದಿದ್ದಾರೆ. ಶಾಲೆಗಳು ಬೀಳುವ ಸ್ಥಿತಿಯಲ್ಲಿ ಇವೆ.  
ಬೇಕಿದ್ದರೆ ಅವರ ಅಭಿಮಾನಿಗಳು ಸ್ಮಾರಕ ನಿರ್ಮಿಸಲಿ. ಜನಸಾಮಾನ್ಯರ ದುಡ್ಡು ದುರುಪಯೋಗ ಆಗಬಾರದು ಎಂದು ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಚಂದ್ರಕಾಂತ ಹುಕ್ಕೇರಿ, ಚಿಕ್ಕೊಡಿ ಪಟ್ಟಣದಲ್ಲಿ ಅನ್ನದಾನ ಸಮಿತಿ ನಡೆಸುತ್ತಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಗ್ರಾಹಕರಿಗಾಗಿ ಬಿ.ಎಸ್‌.ಎನ್‌.ಎಲ್. ನಿಂದ ಬಂಪರ್ ಆಫರ್