Select Your Language

Notifications

webdunia
webdunia
webdunia
webdunia

ಏಳು ಗುಡ್ಡಗಳ ನಡುವಿರುವ ಬೃಹತ್ ಕೆರೆ ಕಂಡೀರಾ?

ಏಳು ಗುಡ್ಡಗಳ ನಡುವಿರುವ ಬೃಹತ್ ಕೆರೆ ಕಂಡೀರಾ?
ಚಿಕ್ಕಮಗಳೂರು , ಸೋಮವಾರ, 13 ಆಗಸ್ಟ್ 2018 (16:17 IST)
ನಿರಂತರ ಮಳೆಗೆ ಕಾಫಿನಾಡಿನಲ್ಲಿರುವ ಐತಿಹಾಸಿಕ ಅಯ್ಯನಕೆರೆ ಕೋಡಿ ಬಿದ್ದಿದೆ.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ ಐದು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಕೂಡ ಮುಂದುವರೆದಿದ್ದು ಗಿರಿ ಭಾಗದಲ್ಲೂ ಧಾರಾಕಾರ ಮಳೆಯಾಗ್ತಿರೋ ಹಿನ್ನೆಲೆ ಐತಿಹಾಸಿಕ ಅಯ್ಯನಕೆರೆ ಕೋಡಿ ಬಿದ್ದಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಸಮೀಪವಿರುವ ಅಯ್ಯನಕರೆ ಐದು ವರ್ಷಗಳ ಬಳಿಕ ಕೋಡಿ ಬಿದ್ದಿರೋದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.  ಇನ್ನು ಈ ಕೆರೆ ಕಳೆದ ಐದು ವರ್ಷಗಳಿಂದ ಭರ್ತಿಯಾಗದ ಕಾರಣ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಕಂಗಾಲಾಗಿದ್ರು. ಆದ್ರೆ ಈ ವರ್ಷ ಮಳೆಯ ಪ್ರಮಾಣ ಹೆಚ್ಚಾದ ಕಾರಣ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ. ನೀರು ತುಂಬಿ ಕೊಡಿ ಬಿದ್ದಿರೋದು ಸಖರಾಯಪಟ್ಟಣ ಸುತ್ತಮುತ್ತಲಿನ ರೈತರಲ್ಲಿ ಹರ್ಷ ಮೂಡಿಸಿದೆ. 2500 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿರೋ ಈ ಕೆರೆ ಏಳು ಗುಡ್ಡಗಳ ಮಧ್ಯೆವಿರೋದು ಈ ಕೆರೆಯ ವಿಶೇಷತೆಯಾಗಿದೆ. ಹೀಗಾಗಿ ಅಯ್ಯನಕೆರೆ ಪ್ರವಾಸಿಗರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಂವಿಧಾನ ಪ್ರತಿ ಸುಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹ