Select Your Language

Notifications

webdunia
webdunia
webdunia
webdunia

ವಿಫಲವಾದ ಕೊಳವೆ ಬಾವಿಗಳಿಗೆ ಹೀಗೆ ಮಾಡಿ

ವಿಫಲವಾದ ಕೊಳವೆ ಬಾವಿಗಳಿಗೆ ಹೀಗೆ ಮಾಡಿ
ಬೆಂಗಳೂರು , ಭಾನುವಾರ, 23 ಏಪ್ರಿಲ್ 2017 (12:15 IST)
ಕೊಳವೆ ಬಾವಿಗಳು ವಿಫಲವಾದ ಬಳಿಕ ಕೇಸಿಂಗ್ ಪೈಪ್`ಗಳನ್ನ ತೆಗೆಯಲಾಗುತ್ತೆ. ಇದರಿಂದಾಗಿ ಕೊರೆದಿರುವ ಬೋರ್ ವೆಲ್ ಕೊಳವೆ ಅಗವಾಗಿರುತ್ತದೆ. ಇದು ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ. ಚಿಕ್ಕ ಮಕ್ಕಳಿರಲಿ ಸಣ್ಣಗಿರುವವರೂ ಒಳಗೆ ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಕೂಡಲೇ ಕೊಳವೆ ಬಾವಿಗಳನ್ನ ಮುಚ್ಚಬೇಕು.

ವಿಫಲವಾದ ಕೊಳವೆಬಾವಿ ಮುಚ್ಚುವುದು ಹೇಗೆ..? ಕೇಸಿಂಗ್ ತೆಗೆದ ಕೊಳವೆಬಾವಿಗಳಿಗೆ ದಪ್ಪ ಕಲ್ಲುಗಳನ್ನ ಹಾಕಿ. ಕೊಳವೆಯಲ್ಲಿ ಕಲ್ಲು ಸಿಲುಕಿಕೊಳ್ಳವಂತಹ ದಪ್ಪ ಕಲ್ಲುಗಳನ್ನ ಹಾಕಿ. ಕೊಳವೆಗೆ ಕಲ್ಲು ಭದ್ರವಾಗಿ ಹಿಡಿದುಕೊಂಡಿರುವುದನ್ನಖಚಿತಪಡಿಸಿಕೊಂಡು ಬಳಿಕ ಮಣ್ಣಿನಿಂದ ಮುಚ್ಚಿ, ಸಂಪೂರ್ಣ ಕೊಳವೆಗಳನ್ನ ಬಂದ್ ಮಾಡಿ. ಕೇಸಿಂಗ್ ಪೈಪ್`ಗಳಿರುವ ವಿಫಲವಾದ ಕೊಳವೆಬಾವಿಗಳಿಗೆ ಕ್ಯಾಪ್ ಹಾಕಿ ಮುಚ್ಚಿಬಿಡಿ.

ಕೊಳವೆಬಾವಿಗಳನ್ನ ಮುಚ್ಚುವಂತೆ ಸರ್ಕಾರ ಎಷ್ಟೇ ಬಾರಿ ಹೇಳಿದರೂ ಮಾಲೀಕರು ಕಿವಿಗೊಡುತ್ತಿಲ್ಲ. ಸ್ವಯಂಪ್ರೇರಣೆಯಿಂದಲೇ ಬೋರ್ ವೆಲ್ ಕೊರೆಸುವ  ಪ್ರತಿಯೊಬ್ಬ ರೈತರು, ಮಾಲೀಕರು ಸ್ವಯಂ ಪ್ರೇರಣೆಯಿಂದಾಗಿ ಬೋರ್ ವೆಲ್ ಮುಚ್ಚುವ ಕಾರ್ಯಕ್ಕೆ ಮುಂದಾಗಬೇಕಿದೆ. ಒಂದೊಮ್ಮೆ  ಬೋರ್ ವೆಲ್ ಮಾಲೀಕರು ಕೊಳವೆ ಬಾವಿಗಳು ಮುಚ್ಚದೆ  ನಿರ್ಲಕ್ಷ್ಯವಹಿಸಿರುವುದು ಗಮನಕ್ಕೆ ಬಂದರೆ ಸ್ಥಳೀಯ ನಾಗರೀಕರು ಸಹ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸುವ ಕೆಲಸ ಮಾಡಬೇಕಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

17 ವರ್ಷಗಳಲ್ಲಿ 9 ಕೊಳವೆ ಬಾವಿ ದುರಂತ.. ಸುಪ್ರೀಂಕೋರ್ಟ್ ಮಾರ್ಗಸೂಚಿಗೂ ಬೆಲೆ ಇಲ್ಲ