ಫಾರ್ಮ್ ಹೌಸ್ ನಲ್ಲಿ ಸೂರಜ್ ರೇವಣ್ಣ ಕಾಲು ಒತ್ತಲು ಹೇಳಿ ಮಾಡಿದ್ದೇನು ಬಿಚ್ಚಿಟ್ಟ ಯುವಕ

Krishnaveni K
ಬುಧವಾರ, 26 ಜೂನ್ 2024 (10:40 IST)
ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಸೂರಜ್ ರೇವಣ್ಣ ಮೇಲೆ ಸಂತ್ರಸ್ತ ಯುವಕ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾನೆ.

ಅಮವಾಸ್ಯೆ ದಿನ ಸೂರಜ್ ಬಳೆ ಹಾಕಿ, ಸೀರೆ ತೊಟ್ಟುಕೊಳ್ಳುತ್ತಾರೆ ಎಂಬ ವಿಚಿತ್ರ ವಿಚಾರವನ್ನು ಯುವಕ ಹೇಳಿಕೊಂಡಿದ್ದಾನೆ. ಇದು ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ ಯುವಕ ಹೇಳಿದ ವಿಚಾರ ಕೇಳಿ ಬೆಚ್ಚಿ ಬೀಳುವಂತಾಗಿದೆ. ಸೂರಜ್ ರೇವಣ್ಣ ವರ್ತನೆ ಬಗ್ಗೆ ಆತ ಹೇಳಿಕೊಂಡಿದ್ದಾನೆ.

ಈ ಮೊದಲು ಹೊಳೆನರಸೀಪುರದಲ್ಲಿ ಜೆಡಿಎಸ್ ಸಮಾವೇಶವೊಂದನ್ನು ನಡೆಸಿಕೊಟ್ಟಿದ್ದೆ. ಅದನ್ನು ನೋಡಿ ಮೆಚ್ಚಿಕೊಂಡಿದ್ದ ಸೂರಜ್ ನನ್ನ ಫೋನ್ ನಂಬರ್ ತೆಗೆದುಕೊಂಡರು. ಬಳಿಕ ನನಗೆ ಒಂದು ದಿನ ಗುಡ್ ಮಾರ್ನಿಂಗ್ ಮೆಸೇಜ್ ಜೊತೆಗೆ ಲವ್ ಸಿಂಬಲ್ ಇರುವ ಇಮೋಜಿ ಕಳುಹಿಸಿದ್ದರು.

ಅದಾದ ಬಳಿಕ ನನ್ನನ್ನು ಫಾರ್ಮ್ ಹೌಸ್ ಗೆ ಬರಲು ಹೇಳಿದ್ದರು. ಫಾರ್ಮ್ ಹೌಸ್ ನಲ್ಲಿ ನನ್ನನ್ನು ರೂಂ ಒಳಗೆ ಕರೆದೊಯ್ದರು. ಆ ವೇಳೆ ಮೊದಲು ಕಾಲು ಒತ್ತಲು ಹೇಳಿದರು. ಕಾಲು ಒತ್ತುವಾಗ ಏನು ಮಾಡಿದರು ಎಂದು ನಾನು ಇಲ್ಲಿ ಹೇಳಲೂ ಸಾಧ್ಯವಿಲ್ಲ ಎಂದು ಯುವಕ ಹೇಳಿಕೊಂಡಿದ್ದಾನೆ. ಅಮವಾಸ್ಯೆ ದಿನ ಸೂರಜ್ ಸೀರೆ ಉಡ್ತಾನೆ, ಬಳೆ ತೊಡ್ತಾನೆ ಎಂದು ಯುವಕ ಹೇಳಿಕೊಂಡಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆ ಶಿವಕುಮಾರ್ ಗೆ ಸಿಎಂ ಕಟ್ಟಿದರೆ ಹೈಕಮಾಂಡ್ ಗೆ ಶುರುವಾಗಿದೆ ಈ ಭಯ

ಮೋದಿ ಬರುತ್ತಿದ್ದಾರೆಂದು ಉಡುಪಿಯಲ್ಲಿ ಫುಲ್ ಆಕ್ಟಿವ್ ಆದ ಬಿಜೆಪಿ ನಾಯಕರು

ಭಾರತದ ನಾಗರಿಕ ಅಲ್ಲದಿದ್ದರೂ ಆಧಾರ್ ಕಾರ್ಡ್ ಇದೆ ಎಂದು ಮತದಾನ ಅವಕಾಶ ನೀಡಬೇಕೇ: ಸುಪ್ರೀಂಕೋರ್ಟ್ ತಪರಾಕಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ