Select Your Language

Notifications

webdunia
webdunia
webdunia
webdunia

ವಿಶೇಷ ಶ್ರಮಿಕ್ ರೈಲಿನಲ್ಲಿ ತೆರಳಿದ ಜನರೆಷ್ಟು?

ವಿಶೇಷ ಶ್ರಮಿಕ್ ರೈಲಿನಲ್ಲಿ ತೆರಳಿದ ಜನರೆಷ್ಟು?
ಕಾರವಾರ , ಗುರುವಾರ, 28 ಮೇ 2020 (20:47 IST)
ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೊಂಕಣ ಪ್ರದೇಶದಲ್ಲಿ ಅತಂತ್ರರಾಗಿದ್ದರು ಇದೀಗ ತಮ್ಮ ತವರು ರಾಜ್ಯಕ್ಕೆ ಮರಳಿದ್ದಾರೆ.

 67,178 ಜನರನ್ನು ಕೊಂಕಣ ರೈಲ್ವೆಯು ವಿಶೇಷ ಶ್ರಮಿಕ್ ರೈಲುಗಳ ಮೂಲಕ ಅವರ ತವರು ರಾಜ್ಯಕ್ಕೆ ಕಳುಹಿಲಾಗಿದೆ.

 ಕೋವಿಡ್ -19 ಸೊಂಕು ಹರಡದಂತೆ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿತ್ತು. ಹೀಗಾಗಿ ಕೊಂಕಣ ಪ್ರದೇಶದಲ್ಲಿ ಸಾವಿರಾರು ವಲಸೆ ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಆಗ ಆಯಾ ರಾಜ್ಯ ಸರ್ಕಾರಗಳ ಕೋರಿಕೆಯ ಮೇರೆಗೆ ಕೊಂಕಣ ರೈಲ್ವೆಯು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಕೊಂಕಣ ಪ್ರದೇಶದಿಂದ ಸಂಕಷ್ಟಕ್ಕೀಡಾಗಿದ್ದ ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಕಳುಹಿಸಲು 50 ವಿಶೇಷ ಶ್ರಮಿಕ್ ರೈಲುಗಳನ್ನು ಓಡಿಸಿದೆ.

ಶ್ರಮಿಕ್ ವಿಶೇಷ ರೈಲುಗಳು ಉಡುಪಿ, ಮಡಗಾಂವ್, ತಿವಿಮ್, ಕರ್ಮಲಿ, ಸಿಂದುದುರ್ಗ್, ರತ್ನಾಗಿರಿ ಮತ್ತು ಚಿಪ್ಲುನ್ ಕೊಂಕಣ ರೈಲ್ವೆ ನಿಲ್ದಾಣಗಳಿಂದ ಉತ್ತರಪ್ರದೇಶ, ಜಾರ್ಖಂಡ್, ಬಿಹಾರ, ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಮುಂತಾದ ರಾಜ್ಯಗಳಿಗೆ 67,178 ಪ್ರಯಾಣಿಕರನ್ನು ಕರೆದೊಯ್ಯಲಾಗಿದೆ ಎಂದು ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ. ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷರ ಪದಗ್ರಹಣಕ್ಕೆ 4 ಲಕ್ಷ ಜನ ಸಾಕ್ಷಿ