Select Your Language

Notifications

webdunia
webdunia
webdunia
webdunia

ನಟ್ಟ ನಡುರಾತ್ರಿ ಹುಲಿಯನ್ನೇ ಹಿಡಿದದ್ದು ಹೇಗೆ?

ನಟ್ಟ ನಡುರಾತ್ರಿ ಹುಲಿಯನ್ನೇ ಹಿಡಿದದ್ದು ಹೇಗೆ?
ಮಡಿಕೇರಿ , ಬುಧವಾರ, 20 ಮೇ 2020 (18:40 IST)
ಜಾನುವಾರು ಹಾಗೂ ಜನರಲ್ಲಿ ತೀವ್ರ ಜೀವಭಯಕ್ಕೆ ಕಾರಣವಾಗಿದ್ದ ಹುಲಿಯೊಂದನ್ನು ಕೊನೆಗೂ ಸೆರೆಹಿಡಿಯಲಾಗಿದೆ.

ಕೊಡಗು ಜಿಲ್ಲೆಯ  ವಿರಾಜಪೇಟೆ ತಾಲೂಕಿನ ಶ್ರೀಮಂಗಲ ಗ್ರಾಮ ವ್ಯಾಪ್ತಿಯಲ್ಲಿ   ಜನ ಮತ್ತು ಜಾನುವಾರುಗಳಿಗೆ ಕಂಟಕವಾಗಿದ್ದ ಹುಲಿಯನ್ನು  ಸೆರೆ ಹಿಡಿಯಲಾಗಿದೆ.

ನಡುರಾತ್ರಿ ಅಂದಾಜು 8 ವಷ೯ ಪ್ರಾಯದ ಹುಲಿಯನ್ನು ಅರವಳಿಕೆ ನೀಡಿ ಸೆರೆ ಹಿಡಿಯಲಾಗಿದ್ದು ಸೆರೆ ಸಿಕ್ಕಿರುವ ಹುಲಿಯನ್ನು ಮೈಸೂರು ಮೖಗಾಲಯಕ್ಕೆ ಸಾಗಿಸಲಾಗಿದೆ.

ಹಲವು ಜಾವಾರುಗಳನ್ನು ಕೊಂದು ಗ್ರಾಮಸ್ಥರಲ್ಲಿ ಜೀವಭಯ ಉಂಟು ಮಾಡಿದ್ದ ಹುಲಿಯನ್ನು  ಸೆರೆ  ಹಿಡಿಯಲು 1 ತಿಂಗಳಿನಿಂದ ಅರಣ್ಯ ಇಲಾಖೆ ಕಾಯಾ೯ಚರಣೆ  ಕೈಗೊಂಡಿತ್ತು. ಹಲವು ಬಾರಿ ಹುಲಿ ಸೆರೆಯಿಂದ  ತಪ್ಪಿಸಿಕೊಂಡಿತ್ತು.

ಕೊನೆಗೂ ಸೆರೆ ಸಿಕ್ಕಿರುವ ಹುಲಿಯಿಂದಾಗಿ ಶ್ರೀಮಂಗಲ, ಹುದಿಕೇರಿ ವ್ಯಾಪ್ತಿಯ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈನಿಂದ ಬಂದು ಚೆಕ್ ಪೋಸ್ಟ್ ಸ್ಕ್ರೀನಿಂಗ್ ವೇಳೆ ಮೃತಪಟ್ಟ ಮಹಿಳೆ