Select Your Language

Notifications

webdunia
webdunia
webdunia
webdunia

ಕೊರೋನಾದಿಂದ ಮೃತರಾದವರ ದೇಹಗಳನ್ನು ಹೀಗೆ ಸಂರಕ್ಷಿಸಲಾಗುತ್ತದೆ!

ಕೊರೋನಾದಿಂದ ಮೃತರಾದವರ ದೇಹಗಳನ್ನು ಹೀಗೆ ಸಂರಕ್ಷಿಸಲಾಗುತ್ತದೆ!
ನವದೆಹಲಿ , ಶುಕ್ರವಾರ, 10 ಏಪ್ರಿಲ್ 2020 (09:39 IST)
ನವದೆಹಲಿ: ದೇಶದಲ್ಲಿ ಕೊರೋನಾದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ ಈಗಾಗಲೇ ಶತಕ ದಾಟಿದೆ. ಕೊರೋನಾದಿಂದ ಮೃತಪಟ್ಟವರ ದೇಹವನ್ನು ಯಾವ ರೀತಿ ನೋಡಿಕೊಳ್ಳಲಾಗುತ್ತದೆ ಎಂಬ ಬಗ್ಗೆ ಹಲವು ಊಹಾಪೋಹಗಳಿವೆ. ಅಷ್ಟಕ್ಕೂ ಮೃತದೇಹಗಳನ್ನು ಹೇಗೆ ಸಂರಕ್ಷಿಸಲಾಗುತ್ತದೆ ಗೊತ್ತಾ?


ಕೊರೋನಾದಿಂದ ವ್ಯಕ್ತಿ ಮೃತಪಟ್ಟರೆ ಆತನ ದೇಹವನ್ನು ಇರಿಸಲು ಪ್ರತ್ಯೇಕ ಶವಾಗಾರ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಪ್ರತಿಯೊಂದು ಮೃತದೇಹವನ್ನಿಡಲೂ ಪ್ರತ್ಯೇಕ ಬ್ಯಾಗ್ ಇಟ್ಟುಕೊಳ್ಳಲಾಗಿದೆ.

ಈ ಬ್ಯಾಗ್ ಗೆ ಲೀಕೇಜ್ ಪ್ರೂಫ್ ಜಿಪ್ ಇರುವಂತೆ ನೋಡಿಕೊಳ್ಳಲಾಗುತ್ತದೆ. ಈ ಮೃತದೇಹವನ್ನು ಬ್ಯಾಗ್ ನೊಳಗೆ ಕವರ್ ಮಾಡುವ ವ್ಯಕ್ತಿಯೂ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಕವರ್ ಗೆ ಹಾಕುವ ಮುನ್ನ ಮೃತದೇಹವನ್ನು ಸೋಂಕು ಬಾರದಂತಹ ದ್ರಾವಣದಿಂದ ಶುಚಿಗೊಳಿಸಲಾಗುತ್ತದೆ. ಮೊದಲು ಮೃತದೇಹವನ್ನು ಪ್ಲಾಸ್ಟಿಕ್ ಕವರ್ ನಿಂದ ಸುತ್ತಿ ಬಳಿಕ ಬಿಳಿ ಬಟ್ಟೆಯಿಂದ ಸುತ್ತಿ ಕವರ್ ಮಾಡಲಾಗುತ್ತದೆ.

ಮೃತ ವ್ಯಕ್ತಿಯ ಸಂಬಂಧಿಕರಿಗೆ ದೂರದಿಂದಲೇ ಅಂತಿಮ ದರ್ಶನ ಪಡೆಯಲು ಅವಕಾಶ ನೀಡಲಾಗುತ್ತದೆ. ಪೊಲೀಸರ ಒಪ್ಪಿಗೆ ಮೇರೆಗೇ ಶವ ಸಂಸ್ಕಾರ ನಡೆಸಲು ಕುಟುಂಬಸ್ಥರಿಗೆ ಒಪ್ಪಿಸಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಎಫೆಕ್ಟ್; ಇಂದಿನಿಂದ ಬೆಂಗಳೂರು ಸೀಲ್ ಡೌನ್