Select Your Language

Notifications

webdunia
webdunia
webdunia
webdunia

ಭಾರೀ ಮಳೆಗೆ ಕುಸಿದ ಮೇಲ್ಫಾವಣಿ: ವೃದ್ಧೆ ಪಾರು

ಭಾರೀ ಮಳೆಗೆ ಕುಸಿದ ಮೇಲ್ಫಾವಣಿ: ವೃದ್ಧೆ ಪಾರು
bengaluru , ಶನಿವಾರ, 4 ಸೆಪ್ಟಂಬರ್ 2021 (19:03 IST)
ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು ಹೊರವಲಯದ ಹಳೆಯಂಗಡಿ ಸಮೀಪದ 10ನೇ ತೋಕೂರು ಬಳಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ನಿನ್ನೆ ರಾತ್ರಿ ಪೂರ್ತಿ ಮಳೆ ಸುರಿದಿತ್ತು. ಪರಿಣಾಮ ಓಂಕಾರೇಶ್ವರಿ 2ನೇ ಅಡ್ಡರಸ್ತೆಯಲ್ಲಿರುವ ಶೋಭಾ ಎಂಬುವವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ
. ರಾತ್ರಿ ಮನೆಮಂದಿ ಮಲಗಿದ್ದ ವೇಳೆ ಮನೆಯ ಹಂಚುಗಳು ಬೀಳುತ್ತಿದ್ದ ಶಬ್ದಕ್ಕೆ ಮನೆಮಂದಿ ಎಚ್ಚೆತ್ತು ನೋಡಿದಾಗ ಮನೆಯ ಹಂಚು, ಪಕ್ಕಾಸುಗಳು ಬೀಳುತ್ತಿತ್ತು. ಇದನ್ನು ಕಂಡು ಮನೆಮಂದಿ ಹೊರಗಡೆ ಓಡಿ ಹೋಗಿದ್ದಾರೆ.
ಅಷ್ಟರಲ್ಲಿ ಸುಮಾರು 70 ವರ್ಷ ಪ್ರಾಯದ ಉಮ್ಮಕ್ಕ ಎಂಬ ಮಹಿಳೆಯ ಮೇಲೆ ಮೇಲ್ಚಾವಣಿ ಕುಸಿದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಿಗೆ ಮುಲ್ಕಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಲಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಶಾಸಕ ಸಿಟಿ ರವಿಗೆ ಕಾಂಗ್ರೆಸ್ ಮುಖಂಡ ಸಯೀದ್ ಅಹ್ಮದ್ ಚಾಲೆಂಜ್