Publish Date: Sun, 05 Feb 2017 (11:40 IST)
Updated Date: Sun, 05 Feb 2017 (11:49 IST)
ಮದುವೆ ಮಹೂರ್ತಕ್ಕೆ ತಯಾರಾಗುತ್ತಿದ್ದ ವರ ಏಕಾಏಕಿ ಹೃದಯಾಘಾತದಿಂದ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ತುಮಕೂರಿನ ಗವಿರಂಗ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಬರಸಿಡಿಲಿನಂತೆ ಬಂದೆರಗಿದ ಈ ಆಘಾತದಿಂದ ಸಡಗರ ಸಂಭ್ರಮದಲ್ಲಿದ್ದ ಮಂಟಪದಲ್ಲಿಗ ನೀರವ ಮೌನ, ಶೋಕ ಆವರಿಸಿದೆ.
ಮೃತ ವಸಂತಕುಮಾರ್ ಮತ್ತು ಅವರನ್ನು ಮದುವೆಯಾಗಲಿದ್ದ ಕಾತ್ಯಾಯನಿ ಇಬ್ಬರು ಕೂಡ ಎಂಟೆಕ್ ಪದವೀಧರರಾಗಿದ್ದು ನಿನ್ನೆಯಷ್ಟೇ ರಾತ್ರಿಯಷ್ಟೇ ಆರತಕ್ಷತೆ ನಡೆದಿತ್ತು.
ಇಂದು ಮುಂಜಾನೆ ಮದುವೆ ಮುಹೂರ್ತವಿದ್ದು, ಹೊಸ ಜೀವನಕ್ಕೆ ಅಡಿ ಇಡಲು ತಯಾರಾಗುತ್ತಿದ್ದ ವರ ಕಲ್ಯಾಣ ಮಂಟಪದಲ್ಲೇ ಹೃದಯಾಘಾತಕ್ಕೊಳಗಾಗಿ ದುರ್ಮರಣವನ್ನಪ್ಪಿದ್ದಾನೆ.
ಮದುವೆ ಮನೆ ಈಗ ಸಾವಿನ ಮನೆಯಾಗಿ ಬದಲಾಗಿದ್ದು ಮದುಮಗಳು ಮತ್ತು ವರನ ಪರಿವಾರದವರ ಆಕ್ರಂದನ ಮುಗಿಲು ಮುಟ್ಟಿದೆ.