Select Your Language

Notifications

webdunia
webdunia
webdunia
webdunia

ಹೋಟೆಲ್ ಮಾಲಿಕರಿಂದ ಗ್ರಾಹಕರಿಗೆ ಶಾಕ್..!

ಹೋಟೆಲ್ ಮಾಲಿಕರಿಂದ ಗ್ರಾಹಕರಿಗೆ ಶಾಕ್..!
bangalore , ಮಂಗಳವಾರ, 5 ಏಪ್ರಿಲ್ 2022 (20:42 IST)
ದಿನನಿತ್ಯ ಬಳಸುವ ವಸ್ತುಗಳ‌ ಮೇಲೆ ದರ ಹೆಚ್ಚಾಗಿರುವಿದರಿಂದ, ಹೋಟಲ್ ಮಾಲಿಕರು ಸಹ ಉಪಹಾರಗಳಲ್ಲಿ ಇವತ್ತಿನಿಂದಲ್ಲೆ ದರ ಪರಿಷ್ಕರಣೆ ಮಾಡಲಿದ್ದಾರೆ.. ಎಲ್‌ಪಿಜಿ ಸಿಲಿಂಡರ್ ದರ ಏರಿಕೆ,ಹಾಲು,‌ ಅಡುಗೆ ಎಣ್ಣೆ, ದರ ಹೆಚ್ಚಾಗಿರೋ ಹಿನ್ನಲೆ ನೇರವಾಗಿ ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ನೀಡಲಿದ್ದಾರೆ, ಎಲ್ಲಾ ಆಹಾರಗಳಮೇಲು, 5 ರಿಂದ 10 ರೂಪಾಯಿ‌ ಹೆಚ್ಚಳಕ್ಕೆ ಮುಂದಾಗಿದ್ದಾರೆ.
ಕಾಫಿ‌ ದರ ಮೊದಲು 10 ರೂ, ಈಗ 12 ರಿಂದ 15 ರೂಗೆ ಏರಿಕೆ.
ವಡೆ ದರ ಮೊದಲು 20 ರೂ, ಈಗ 25 ರಿಂದ 30 ರೂಗೆ ಏರಿಕೆ.
ಎರಡು ಇಡ್ಲಿಯ ದರ 30 ರಿಂದ 35 ರೂ, ಈಗ‌ 40 ರೂಗೆ ಏರಿಕೆ.
ದೋಸೆ ದರ 50 ರೂ ಇರೋದು 65 ರೂಗೆ ಏರಿಕೆ.
ಕರಬಾತು ದರ 25 ರೂಪಾಯಿ ಇದ್ದಾದು 26-27
ಏರಿಕೆಯಾಗ್ತಿದೆ.
ರೈಸ್ ಬಾತ್ ದರ 40 ರೂಪಾಯಿ ಇದ್ದಾದ್ದು ,ಈಗ  42 ರೂ ಗೆ ಏರಿಕೆಯಾಗಿದೆ.
ಸೌತ್ ಇಂಡಿಯಾ ಊಟ 100-115 ಇದ್ದಾದ್ದು 120-125 ಏರಿಕೆ.
ನಾರ್ತ್ ಇಂಡಿಯಾ 190 ಇದ್ದಾದ್ದು 200-210ರೂಪಾಯಿ ಏರಿಕೆಯಾಗಿದೆ.
ಇನ್ನೂ ಸ್ವೀಟ್ಸ್ ಲ್ಲೂ 2-3 ರೂಪಾಯಿ ಹೆಚ್ಚಾಗಲಿದ್ದಯ, ಹಲವಾರು ತಿನಿಸುಗಳ ಮೇಲೆ ಬೆಲೆ ಹೆಚ್ಚಾಗಿದ್ದು, ಇದೆಲ್ಲವೂ ಗ್ರಾಹಕರಿಗೆ ತಲೆಬಿಸಿಯಾದಂತಾಗಿದೆ..
 
 ದಿನ ನಿತ್ಯವೂ ಒಂದಾದರ ಮೇಲೆ ಮತ್ತೊಂದು ಅಗತ್ಯವಸ್ತುಗಳ‌ ಮೇಲೆ ದರ ಪರಿಷ್ಕರಣೆ ಮಾಡ್ತಿದ್ರೆ, ಸಾರ್ವಜನಿಕರ ಗತಿ ಆದೋಗತಿ ಆಗೋದ್ರಲ್ಲಿ ಎರಡುಮಾತಿಲ್ಲ.. ಮೊದಲಿಗೆ ದಿನೇ ದಿನೇ ಪೆಟ್ರೋಲ್,ಡೀಸೆಲ್‌ ದರ ಹೆಚ್ಚಾಯ್ತು ತದ ನಂತರ, ಅಡುಗೆ ಎಣ್ಣೆ ಏಕಾಏಕಿ ಹೆಚ್ಚಾಯ್ತು, ಹಾಲಿನ ದರವೂ, ಏರಿಕೆ ಆಯ್ತು.. ಇದೆಲ್ಲವುದರಿಂದ ತಪ್ಪಿಸಿಕೊಳ್ಳಲು, ವ್ಯಾಪಾರಸ್ಥರು ಗ್ರಾಹಕರ ತಲೆಯಮೇಲೆ ಹಾಕುತ್ತಿದ್ದಾರೆ.. ಈಗಾಗ್ಲೆ ಟ್ಯಾಕ್ಸಿಯವರು ದರ ಪರಿಷ್ಕರಣೆ ಮಾಡ್ತಿದ್ದಾರೆ, ಈಗ ಹೋಟೆಲ್ ನವ್ರು, ಹಾಗಾದ್ರೆ ಗ್ರಾಹಕರು ಎಲ್ಲಿಗೆ ಹೋಗಬೇಕು ಇನ್ನೂ ಯಾವ್ದು ಯಾವುದರ ಬೆಲೆ ಎಷ್ಟೆಷ್ಟಾಗುತ್ತೊ, ಈ ದುಬಾರಿ ದುನಿಯಾದಲ್ಲಿ ಹೇಗೆ ಜೀವನ ಸಾಗಿಸೋದು ಅನ್ನೋದೆ ಸಾರ್ವಜನಿಕರ ಯಕ್ಷ ಪ್ರೆಶ್ನೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾದಲ್ಲಿ ಮಂತ್ರಿಗಳ ಸಾಮೂಹಿಕ ರಾಜೀನಾಮೆ