Publish Date: Sun, 24 Sep 2023 (15:00 IST)
Updated Date: Sun, 24 Sep 2023 (15:50 IST)
ಮಂಗಳವಾರ ಬೆಂಗಳೂರು ಬಂದ್ ಹಿನ್ನೆಲೆ ಹೊಟೇಲ್ ಮಾಲೀಕರ ಅಸೋಸಿಯೇಷನ್ ನೈತಿಕ ಬೆಂಬಲ ಸೂಚಿಸಿದೆ.
ದಿಢೀರ್ ಬಂದ್ ಘೋಷಣೆಯಾದ ಕಾರಣ ಬಂದ್‌ಗೆ ನೈತಿಕ ಬೆಂಬಲ ನೀಡಲು ಹೋಟೆಲ್ ಮಾಲೀಕರಿಗೆ ಸೂಚನೆ ನೀಡಿದೆ.. ಇನ್ನು ಈ ಬಗ್ಗೆ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಪ್ರತಿಕ್ರಿಯಿಸಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಡು, ನುಡಿ ಜಲದ ಬಗ್ಗೆ ಸರ್ಕಾರ ಎಲ್ಲರೊಡನೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಬೇಕು.ಈ ವಿಷಯದಲ್ಲಿ ರಾಜಕೀಯ ತರಬಾರದು ಎಂದಿದ್ದಾರೆ.. ಇನ್ನು ಈ ಬಂದ್‌ಗೆ ನಮ್ಮ ನೈತಿಕ ಬೆಂಬಲವಿದೆ ಎಂದು ಹೇಳಿದ್ದಾರೆ.