Select Your Language

Notifications

webdunia
webdunia
webdunia
webdunia

ಮರ್ಯಾದಾ ಹತ್ಯೆ ಕೇಸ್ ಸುಮೋಟೊ ಕೇಸ್ ಹಾಕಿ ತನಿಖೆ: ಪರಮೇಶ್ವರ್

ಮರ್ಯಾದಾ ಹತ್ಯೆ ಕೇಸ್ ಸುಮೋಟೊ ಕೇಸ್ ಹಾಕಿ ತನಿಖೆ: ಪರಮೇಶ್ವರ್
ಬೆಂಗಳೂರು , ಮಂಗಳವಾರ, 29 ಆಗಸ್ಟ್ 2023 (14:01 IST)
ಬೆಂಗಳೂರು : ರಾಜ್ಯದಲ್ಲಿ ನಡೆದಿರುವ ಮರ್ಯಾದಾ ಹತ್ಯೆ ಕುರಿತು ಸುಮೋಟೊ ಕೇಸ್ ದಾಖಲು ಮಾಡುವ ಬಗ್ಗೆ ಗೃಹ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
 
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಕರಣದ ಕುರಿತು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನು ಪ್ರಕಾರ ಯಾರಾದರೂ ದೂರು ಕೊಡಬೇಕು.

ದೂರು ಕೊಡದೇ ಹೋದರೂ ಸುಮೋಟೊ ಕೇಸ್ ದಾಖಲು ಮಾಡಲು ಅವಕಾಶ ಇದೆ. ಸುಮೋಟೊ ಕೇಸ್ ಪೊಲೀಸರು ತೆಗೆದುಕೊಳ್ಳುತ್ತಾರೆ. ಕೇಸ್ನ ಪ್ರಾಮುಖ್ಯತೆ ನೋಡಿ ಪೊಲೀಸರೇ ಸುಮೋಟೊ ಕೇಸ್ ತೆಗೆದುಕೊಳ್ಳುವ ಪ್ರಕ್ರಿಯೆ ನಮ್ಮಲ್ಲಿ ಇದೆ ಎಂದು ಹೇಳಿದರು. 

ಸಮಾಜದಲ್ಲಿ ಇಂತಹ ಘಟನೆ ಆಗಬಾರದು. ಸಮಾಜದಲ್ಲಿ ಇದೊಂದು ದೊಡ್ಡ ಪಿಡುಗು ತರಹ ಆಗುತ್ತಿದೆ. ನಾನು ಕಾನೂನು ಪ್ರಕಾರ ನಿಲ್ಲಿಸಬಹುದು. ಆದರೆ ಜನರು ಇದನ್ನು ಇನ್ನೂ ಹೆಚ್ಚು ಅರ್ಥ ಮಾಡಿಕೊಳ್ಳಬೇಕು. ಗೃಹ ಇಲಾಖೆಯೇ ಕೆಲವು ಸಂದರ್ಭಗಳಲ್ಲಿ ಸುಮೋಟೊ ಕೇಸ್ ಹಾಕಿಕೊಂಡು ತನಿಖೆ ಮಾಡುತ್ತದೆ. ಈ ಪ್ರಕರಣದಲ್ಲಿ ಏನೇನಾಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಇದರ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು. 


Share this Story:

Follow Webdunia kannada

ಮುಂದಿನ ಸುದ್ದಿ

ಚಾಮುಂಡಿಗೆ ರೇಷ್ಮೆ ಸೀರೆ ಕೊಟ್ಟು ಹರಕೆ ತೀರಿಸಿದ ಸಿಎಂ, ಡಿಸಿಎಂ!