Select Your Language

Notifications

webdunia
webdunia
webdunia
webdunia

ಶಾಲಾ ವಾರ್ಷಿಕೋತ್ಸವ ಸಂದರ್ಭ ಹೆಜ್ಜೇನು ದಾಳಿ: 20 ಮಕ್ಕಳಿಗೆ ಗಾಯ

ಶಾಲಾ ವಾರ್ಷಿಕೋತ್ಸವ ಸಂದರ್ಭ ಹೆಜ್ಜೇನು ದಾಳಿ: 20 ಮಕ್ಕಳಿಗೆ ಗಾಯ
ದೇವನಹಳ್ಳಿ , ಮಂಗಳವಾರ, 8 ಜನವರಿ 2019 (18:16 IST)
ಶಾಲಾ ವಾರ್ಷಿಕೋತ್ಸವ ನಡೆಯುವ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಡೆದಿದೆ.

ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಘಟನೆ ನಡೆದಿದೆ. ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ರೂಬಿ ಶಾಲೆಯಿಂದ ವಾರ್ಷಿಕೊತ್ಸವ ಆಯೋಜಿಸಲಾಗಿತ್ತು. ಈ ವೇಳೆ ಅಕ್ಕಪಕ್ಕದ ಕಡೆ ಮರಗಳಲ್ಲಿದ್ದ ಹೆಜ್ಜೆನು ಸುಮಾರು ಇಪ್ಪತ್ತು ಮಕ್ಕಳ ಮೇಲೆ ದಾಳಿ ನಡೆಸಿವೆ.

ಹೆಜ್ಜೇನು ದಾಳಿಗೆ ಚೆಲ್ಲಾಪಿಲ್ಲಿಯಾಗಿ ಮಕ್ಕಳು ಹಾಗೂ ಸ್ಥಳೀಯರು ಓಡಿದರು. ಅಸ್ವಸ್ಥ ಹಲವು ಮಕ್ಕಳಿಗೆ ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ವೈದ್ಯ ವಿದ್ಯಾರ್ಥಿಗಳು ಗಾಂಜಾ ಸೇವನೆ ಪ್ರಕರಣ: ಆರೋಪಿ ಬಂಧನ