ಮನೆ ಮಾಲೀಕರೇ ಹುಷಾರ್ : ಲಿವಿಂಗ್ ರಿಲೇಷನ್ಶಿಪ್ನಲ್ಲೇ ಇದ್ದು ಮನೆ ದೋಚಿದ ಖತರ್ನಾಕ್ ಜೋಡಿ

Webdunia
ಶುಕ್ರವಾರ, 30 ಜೂನ್ 2023 (11:45 IST)
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು ಇದೀಗ ಬಾಡಿಗೆ ಕೊಡುವ ಮನೆ ಮಾಲೀಕರು ಎಚ್ಚೆತ್ತುಕೊಳ್ಳಬೇಕಾಗಿದೆ.
 
ಹೌದು, ಬೆಂಗ್ಳೂರಿನಲ್ಲಿ ಲಿವಿಂಗ್ ರಿಲೇಷನ್ಶಿಪ್ನಲ್ಲೇ ಇದ್ದುಕೊಂಡು ಮನೆ ದೋಚಿದ ಖತರ್ನಾಕ್ ಜೋಡಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ. ಮನೆಯನ್ನೇ ಗುಡಿಸಿ ಗುಂಡಾತರ ಮಾಡಿದ್ದ ಜೋಡಿ ಇದೀಗ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ. ಲಿಖಿತಾ ಹಾಗೂ ಸುಮಂತ್ ಬಂಧಿತ ಆರೋಪಿಗಳು. 

ಈ ಖತರ್ನಾಕ್ ಜೋಡಿ ತಾವು ಬಾಡಿಗೆಗೆ ಇದ್ದ ಮಾಲೀಕರ ಮನೆಯಲ್ಲೇ ಬರೋಬ್ಬರಿ 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದರು. ಬೆಂಗಳೂರು ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್ನಲ್ಲಿ ಘಟನೆ ನಡೆದಿತ್ತು.

ನಡೆದಿದ್ದು ಹೇಗೆ..?

ಆರೋಪಿಗಳಾದ ಲಿಖಿತಾ, ಸುಮಂತ್, ಎಜಿಎಸ್ ಬಡಾವಣೆಯ ಪ್ರೇಮಲತಾ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಬಾಡಿಗೆ ಜಾಸ್ತಿ ಬರುತ್ತೆ ಅಂತಾ ಲಿವಿಂಗ್ ರಿಲೇಷನ್ನಲ್ಲಿರಲು ಮಾಲೀಕರು ಅನುಮತಿಸಿದ್ದರು.

ಕಳೆದ ನಾಲ್ಕೂವರೆ ತಿಂಗಳಿನಿಂದ ಬಾಡಿಗೆ ಮನೆಯಲ್ಲಿದ್ದುಕೊಂಡೇ ಮಾಲೀಕರ ಚಲನವಲನ ವೀಕ್ಷಿಸುತ್ತಿದ್ದರು. ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿದರು. ಮನೆ ಖಾಲಿ ಮಾಡಿದ ಕೆಲವೇ ದಿನಗಳಲ್ಲಿ ಮಾಲೀಕರ ಮನೆಯಲ್ಲಿ ಕಳ್ಳತನವಾಯಿತು. ಆರೋಪಿಗಳ ಕೈಚಳಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕದ ಜನತೆಗೆ ಗುಡ್‌ನ್ಯೂಸ್‌, ಬೆಂಗಳೂರು ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಗ್ರೀನ್ ಸಿಗ್ನಲ್

ರೀಲ್ ಹುಚ್ಚಾಟಕ್ಕೆ 15ವರ್ಷದ ಬಾಲಕ ಸಾವು, Viral Video

ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನಾ ಬಿಗ್ ಸ್ಕೆಚ್ ಹಾಕಿದ್ದ ಮೋಸ್ಟ್ ವಾಟೆಂಡ್ ಗ್ಯಾಂಗ್‌ ಎನ್‌ಕೌಂಟರ್‌

ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು: ಮಂಡಳಿಯ ಹಿರಿಯ ಅಧಿಕಾರಿ ಅರೆಸ್ಟ್‌

ಆರ್ ಎಸ್ಎಸ್ ಪಥಸಂಚಲನದ ಫೋಟೋ ಎಡಿಟ್ ಮಾಡಿತಾ ಭೀಮ್ ಆರ್ಮಿ: ಫುಲ್ ಟ್ರೋಲ್

ಮುಂದಿನ ಸುದ್ದಿ
Show comments