Select Your Language

Notifications

webdunia
webdunia
webdunia
webdunia

ಗೃಹ ಸಚಿವ ದಲಿತ ಸಮುದಾಯಕ್ಕೆ ಸ್ಪಂದಿಸುತ್ತಿಲ್ಲ: ದಲಿತ ಸಂಘಟನೆಗಳ ಆಕ್ರೋಶ

ಗೃಹ ಸಚಿವ
ಬೆಂಗಳೂರು , ಮಂಗಳವಾರ, 24 ಮೇ 2016 (18:13 IST)
ದಲಿತ ಸಮುದಾಯಕ್ಕೆ ಸೇರಿದ ಜಿ.ಪರಮೇಶ್ವರ್ ಗೃಹ ಖಾತೆ ಸಚಿವರಾಗಿದ್ದರು ದಲಿತರನ್ನು ರಕ್ಷಣೆ ಮಾಡುವಲ್ಲಿ ತಾರತಮ್ಯ ಧೋರಣೆ ತೋರುತ್ತಿದ್ದಾರೆ ಎಂದು ವಿವಿಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
 
ಗೃಹ ಖಾತೆ ಸಚಿವ ಜಿ. ಪರಮೇಶ್ವರ್ ದಲಿತರ ಕುರಿತು ಭಾಷಣ ಮಾಡುತ್ತಾರೆ. ವೇದಿಕೆಯಲ್ಲಿ ದಲಿತರ ಅನುಭವಿಸುತ್ತಿರುವ ಕಷ್ಟದ ಕುರಿತು ಕಣ್ಣೀರು ಸುರಿಸುತ್ತಾರೆ. ಆದರೆ, ಭ್ರಷ್ಟಾಚಾರ ಆರೋಪ ಹೊತ್ತು ವರ್ಗಾವಣೆಯಾದ ಮಧುರ ವೀಣಾ ಪ್ರಕರಣದ ಕುರಿತು ಯಾವುತ್ತು ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ದಲಿತ ಮುಖಂಡರು ಜಿ. ಪರಮೇಶ್ವರ್ ವಿರುದ್ಧ ಆರೋಪ ಮಾಡಿದ್ದಾರೆ.
 
ಸಿಎಂ ಜನತಾದರ್ಶನದಲ್ಲಿ ದಲಿತ ಮಹಿಳೆಗೆ ನೀಡಿರುವ ಕಿರುಕುಳ ಕುರಿತು ಇಡೀ ರಾಜ್ಯವೇ ಮಾತನಾಡುತ್ತಿದೆ. ಈ ಕುರಿತು ಗೃಹ ಮಂತ್ರಿಯವರು ಯಾವ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ, ಭ್ರಷ್ಟ ಅಧಿಕಾರಿ ಶಾಂತ ಕುಮಾರ್ ಅವರನ್ನು ಮಾತ್ರ ಅಧಿಕಾರದಲ್ಲಿ ಮುಂದುವರೆಸಿ ದಲಿತರ ವಿಷಯದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದಲಿತ ಸಂಘಟನೆಗಳು ಜಿ. ಪರಮೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ದಲಿತ ಮಹಿಳೆಗೆ ಕಿರುಕುಳ ಪ್ರಕರಣ: ಸಿದ್ದರಾಮಯ್ಯಗೆ ತಿರುಗೇಟು ನೀಡಿದ ದೇವೇಗೌಡರು