ನಗರದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಹಿಂದೆಯೇ ಆಯನೂರು ಮಂಜುನಾಥ್ ಪಕ್ಷಕ್ಕೆ ಬರ್ತೀವಿ ಅಂತ ಹೇಳಿದ್ರು.ಆದರೆ ಕಾರಣಾಂತರಗಳಿಂದ ಸೇರಿಸಿಕೊಳ್ಳಲಾಗಿರಲಿಲ್ಲ.ಕಾಂಗ್ರೆಸ್ ಪಾರ್ಟಿ ಬಸ್ಸು ಸೀಟು ತರ ಆಗಬಾರದು.ಹತ್ತೋದು ಇಳಿಯೋದು ಆಗಬಾರದು.ಕಾಂಗ್ರೆಸ್ ಸೇರಿಕೊಂಡು ಪಕ್ಷದಲ್ಲೇ ಇರೋದೆ ಒಂದು ಸುದೈವ.ಕಾಂಗ್ರೆಸ್‌ಗೆ ಆದ ಇಂದು ಇತಿಹಾಸ ಇದೆ.
ಕಾಂಗ್ರೆಸ್‌ಗೆ ಇರುವ ಇತಿಹಾಸ ಜೆಡಿಎಸ್ ಬಿಜೆಪಿಗೆ ಇಲ್ಲ.ಗ್ಯಾರೆಂಟಿಗಳನ್ನ ಯಾಕೆ ಜೆಡಿಎಸ್ ಬಿಜೆಪಿ ಕೊಡಲು ಸಾಧ್ಯವಾಗಿಲ್ಲ.ಆದರೆ ದೇಶಕ್ಕಾಗಿ ನಾವು ಈ ಕಾರ್ಯಕ್ರಮಗಳನ್ನ ಕೊಟ್ಟಿದ್ದೇವೆ.ವ್ಯಕ್ತಿಗಿನ್ನ ಪಕ್ಷದ ಕಾರ್ಯಕ್ರಮ ಮುಖ್ಯ ಅನ್ನೋದು ಇಲ್ಲಿ ಮುಖ್ಯ.ಶಕ್ತಿ ಸಾಮರ್ಥ್ಯ ನೋಡಿ ಟಿಕೆಟ್ ಕೊಡುವ ಬಗ್ಗೆ ತೀರ್ಮಾನ ಮಾಡ್ತೇವೆ.ಪಕ್ಷಕ್ಕೆ ದುಡಿದವರನ್ನ ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆ ಇಲ್ಲ.ಪಕ್ಷಕ್ಕೆ ಬಂದವರನ್ನ ಪಕ್ಕಕ್ಕೆ ತಳ್ಳುವುದನ್ನ ಡಿಕೆಶಿ ಅವಕಾಶ ನೀಡಲ್ಲ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.