Select Your Language

Notifications

webdunia
webdunia
webdunia
webdunia

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಹಿಂದುಸ್ತಾನ್‌ ಆರ್ಟ್‌ ಅಂಡ್‌ ಕ್ರಾಫ್ಟ್‌ ಮೇಳ

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಹಿಂದುಸ್ತಾನ್‌ ಆರ್ಟ್‌ ಅಂಡ್‌ ಕ್ರಾಫ್ಟ್‌ ಮೇಳ
bangalore , ಶುಕ್ರವಾರ, 12 ನವೆಂಬರ್ 2021 (19:08 IST)
ಬೆಂಗಳೂರು ನವೆಂಬರ್‌ 12: ಕರೋನಾ ಸಾಂಕ್ರಾಮಿಕ ಹಾಗೂ ಲಾಕ್‌ಡೌನ್‌ ನಿಂದಾಗಿ ಕರಕುಶಲ ಕರ್ಮಿಗಳು ಸರಿಯಾದ ಮಾರುಕಟ್ಟೆ ಇಲ್ಲದೆ ತೊಂದರೆಗೀಡಾಗಿದ್ದಾರೆ. ಕರಕುಶಲ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ದೊರಕದೇ ತೊಂದರೆಗೆ ಸಿಲುಕಿರುವ ಕರಕುಶಲ ಕರ್ಮಿಗಳ ಸಹಾಯಕ್ಕೆ ಇಂತಹ ಮೇಳಗಳ ಬಹಳ ಸಹಕಾರಿ ಎಂದು ಖ್ಯಾತ ನಟಿ ಸಿಂಧು ಲೋಕನಾಥ್‌ ಅಭಿಪ್ರಾಯಪಟ್ಟರು. 
 
ಇಂದು ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಇಂದಿನಿಂದ 10 ದಿನಗಳ ಆಯೋಜಿಸಿರುವ ಹಿಂದುಸ್ತಾನ್‌ ಆರ್ಟ್‌ ಮತ್ತು ಕ್ರಾಫ್ಟ್‌ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರೋನಾ ಲಾಕ್‌ಡೌನ್‌ ನಿಂದಾಗಿ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕದೇ ಕರಕುಶಲಕರ್ಮಿಗಳು ತೊಂದರೆಗೀಡಾಗಿದ್ದರು. ಅವರಿಗೆ ಸರಿಯಾದ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ 10 ದಿನಗಳ ಕಾಲ ಕಾಲಾವಕಾಶವನ್ನು ಒದಗಿಸಲಾಗಿದೆ. ಸಾರ್ವಜನಿಕರು ಈ ಮೇಳಕ್ಕೆ ಭೇಟಿ ನೀಡಿ ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಕರಕುಶಲ ಕರ್ಮಿಗಳ ಉತ್ಪನ್ನಗಳನ್ನು ಕೊಂಡು ಅವರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಹೇಳಿದರು. 
 
ಈ ಮೇಳದಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ. ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್‍ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್‍ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.
 
ಚಿತ್ತಾರ ಹಾಗೂ ಗ್ರಾಂಡ್‌ ಫ್ಲಿಯಾ ಆಯೋಜಿಸಿರುವ ಈ ಮೇಳದ ಪ್ರಮುಖ ಉದ್ದೇಶ ಕುಶಲಕರ್ಮಿಗಳನ್ನು ಉತ್ತೇಜಿಸಿ ಅವರಿಗೊಂದು ಮಾರುಕಟ್ಟೆ ಕಲ್ಪಿಸುವುದಾಗಿದೆ. 80 ಕ್ಕೂ ಹೆಚ್ಚಿನ ಅಂಗಡಿಗಳ ಮೂಲಕ ಉತ್ಪಾದಕರಿಂದ ನೇರವಾಗಿ ಕರಕುಶಲ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ ಎಂದು ಮೇಳದ ಆಯೋಜಕರಾದ ಅಫ್ತಾಬ್‌ ತಿಳಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ನವೆಂಬರ್ 14 ರಿಂದ ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ