Publish Date: Tue, 15 Sep 2026 (09:59 IST)
Updated Date: Tue, 15 Sep 2026 (10:01 IST)
ಮೈಸೂರು: ಮಸೀದಿ ರಸ್ತೆಯಲ್ಲೇ ಗಣೇಶ ಮೆರವಣಿಗೆ ಮಾಡ್ತೀವಿ, ಇನ್ಸ್ ಪೆಕ್ಟರ್ ಧನಂಜಯ್ ಕಣ್ತುಂಬಿಕೊಳ್ಳಲಿ ಎಂದು ಹಿಂದೂ ಜಾಗರಣ ವೇದಿಕೆ ಸವಾಲು ಹಾಕಿದೆ.
ಮಸೀದಿ ರಸ್ತೆಯಲ್ಲಿ ಮೆರವಣಿಗೆ ಹೋದರೆ ಗ್ರಹಚಾರ ಬಿಡಿಸ್ತೀವಿ ಎಂದಿ ಟಿ ನರಸೀಪುರ ಇನ್ಸ್ ಪೆಕ್ಟರ್ ಧನಂಜಯ್ ಧಮ್ಕಿ ಹಾಕಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರ ವಿರುದ್ಧ ಬಿಜೆಪಿ, ಹಿಂದೂ ಸಂಘಟನೆಗಳು ಈಗಾಗಲೇ ಪ್ರತಿಭಟನೆಯನ್ನೂ ನಡೆಸಿವೆ.
ಇದರ ಬೆನ್ನಲ್ಲೇ ಈಗ ಹಿಂದೂ ಜಾಗರಣ ವೇದಿಕೆ ಮಸೀದಿ ರಸ್ತೆಯಲ್ಲೇ ಗಣೇಶ ಮೆರವಣಿಗೆ ಮಾಡಲು ಹೊರಟಿದೆ. ಟಿ ನರಸೀಪುರದ ಪೊಲೀಸ್ ಠಾಣೆಯ ತುಸು ದೂರದಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಸೆಪ್ಟೆಂಬರ್ 18 ರಂದು ಗಣಪತಿ ಶೋಭಾಯಾತ್ರೆ ನಡೆಸಲು ಹಿಂದೂ ಜಾಗರಣ ವೇದಿಕೆ ತಯಾರಿ ನಡೆಸಿದೆ. ಇದಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 5 ಸಾವಿರ ಕಾರ್ಯಕರ್ತರನ್ನು ಜಮಾವಣೆ ಮಾಡಲು ಹೊರಟಿದೆ. ಇನ್ಸ್ ಪೆಕ್ಟರ್ ಧನಂಜಯ್ ಮುಂದೆಯೇ ವೈಭವದ ಶೋಭಾಯಾತ್ರೆ ನಡೆಸುತ್ತೇವೆ, ಅವರು ಕಣ್ತುಂಬಿಕೊಳ್ಳಲಿ ಎಂದು ಹಿಂದೂ ಜಾಗರಣ ವೇದಿಕೆ ಸವಾಲು ಹಾಕಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ