Select Your Language

Notifications

webdunia
webdunia
webdunia
webdunia

ಕುಮಟಾ ಬಳಿ ಗುಡ್ಡ ಕುಸಿದು ಮೂರು ಮಕ್ಕಳು ಬಲಿ

ಕುಮಟಾ ಬಳಿ ಗುಡ್ಡ ಕುಸಿದು ಮೂರು ಮಕ್ಕಳು ಬಲಿ
ಉತ್ತರ ಕನ್ನಡ , ಭಾನುವಾರ, 11 ಜೂನ್ 2017 (15:59 IST)
ಕುಮಟಾ : ಉತ್ತರಕನ್ನಡ ಜಿಲ್ಲೆ ಕರಾವಳಿಯಾದ್ಯಂತ ಕಳೆದ ಎರಡುದಿನಗಳಿಂದ ಎಡೆಬಿಡದೆ ಮಳೆಸುರಿಯುತ್ತಿದ್ದು, ಪರಿಣಾಮ ಕುಮಟಾದ ದಿವಗಿ ಗ್ರಾಮದ ತಂಡರ್ಕುಳಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದು, 3 ಮಕ್ಕಳು ಸಾವನ್ನಪ್ಪಿದ್ದಾರೆ. 
 
ಹೆದ್ದಾರಿ ಕಾಮಗಾರಿಗಾಗಿ ಗುಡ್ಡವನ್ನು ಕಡಿಯಲಾಗಿದ್ದು , ಭಾರೀ ಮಳೆಗೆ ಗುಡ್ಡ ಮೀನುಗಾರರ ಮನೆಯ ಮೇಲೆ ಕುಸಿದು ಬಿದ್ದಿದೆ. ಪರಿಣಾಮವಾಗಿ ಅವಶೇಷಗಳಡಿ ಸಿಲುಕಿ ಮಕ್ಕಳಾದ ಭವ್ಯಾಅಂಬಿಗ(13), ಯತೀನ್‌(7)ಮತ್ತು 1.5 ವರ್ಷದ ಮಗು  ಧನುಷ್‌ ಸಾವನ್ನಪ್ಪಿದ್ದಾರೆ. ಉಳಿದ 8 ಜನರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
 
ಘಟನಾ ಸ್ಥಳಕ್ಕೆ  ಆಗಮಿಸಿರುವ ಪೊಲೀಸರು, ಅಗ್ನಿ ಶಾಮಕ ದಳದ ಸಿಬಂದಿ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಕೈಗೊಂಡಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/.
 
 

Share this Story:

Follow Webdunia kannada

ಮುಂದಿನ ಸುದ್ದಿ

ರಾಯಣ್ಣ ಬ್ರಿಗೇಡ್`ಗೆ ಗುಡ್ ಬೈ ಹೇಳಿದ ಈಶ್ವರಪ್ಪ