Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಮುಖ್ಯಾಂಶಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಿಎಂ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಮುಖ್ಯಾಂಶಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೆಂಗಳೂರು , ಬುಧವಾರ, 15 ಮಾರ್ಚ್ 2017 (11:39 IST)
ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 12ನೇ ಬಜೆಟ್ ಮಂಡಿಸಿದ್ದು, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಅವರ ಐದನೇ ಬಜೆಟ್ ಆಗಿದೆ. ಬಜೆಟ್‌ನ ಆರಂಭದಲ್ಲಿ ಸಿಎಂ ಹೇಳಿದ ಮಾತುಗಳನ್ನು ಕೆಳಗೆ ಕೊಟ್ಟಿವೆ ಓದಿ ನೋಡಿ-
ಸನ್ಮಾನ್ಯ ಸಭಾಧ್ಯಕ್ಷರೇ ನಾನು 2017-18ನೇ ಸಾಲಿನ ಆಯವ್ಯಯ ಪತ್ರವನ್ನು ಮಂಡಿಸುತ್ತಿದ್ದೇನೆ. ಆಯವ್ಯಯ ಪತ್ರವೆಂದರೆ ಸರ್ಕಾರದ ಒಳನೋಟವನ್ನು ಬಿಂಬಿಸುತ್ತದೆ. ಆಯವ್ಯಯ ಪತ್ರವು ಸರ್ವಾಂಗೀಣ ಅಭಿವೃದ್ಧಿಯ ಆಶಯ ಪತ್ರವಾಗಿದೆ. 
 
ಈ ಮೂಲಕ ಸುಖ, ಶಾಂತಿ ನೆಮ್ಮದಿಯ ಬಲಿಷ್ಠ ಕರ್ನಾಟಕವನ್ನು ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಸಂಕಷ್ಟಗಳ ನಡುವೆಯೂ ಅಗತ್ಯ ಅನುದಾನ ನೀಡಿರುವುದು ಸಮರ್ಥ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಸಿಎಂ ಹೇಳಿದ್ದಾರೆ.

ಮುಖ್ಯಾಂಶಗಳು 

ರೈತರ ಸಾಲ ಮನ್ನಾ ಇಲ್ಲ

ನಗರದಲ್ನಿ 198 ನಮ್ಮ ಕ್ಯಾಂಟಿನ್ ಯೋಜನೆ ಜಾರಿ

ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ ವಿತರಣೆ

ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ವರೆಗೆ  ಸಾಲ ಸೌಲಭ್ಯ

ಶೇ.3 ರ ಬಡ್ಡಿದರದಲ್ಲಿ 10 ಲಕ್ಷ ದವರೆಗೆ ಕೃಷಿ ಸಾಲ

21 ಜಿಲ್ಲೆಗಳಲ್ಲಿ 19 ಹೊಸ ತಾಲೂಕುಗಳ ಘೋಷಣೆ

25 ಲಕ್ಷ ರೈತರಿಗೆ 13,500 ಕೋಟಿ ರೂ. ಸಾಲ ನೀಡುವ ಗುರಿ

ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗಾಗಿ 145 ಚಿಕತ್ಸಾ ಘಟಕಗಳು

ಅನ್ನಭಾಗ್ಯದಡಿ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿಯಂದ 7 ಕೆಜಿಗೆ ಏರಿಕೆ

ಒಂದನೇ ತರಗತಿಯಿಂದಲೇ ಆಂಗ್ಲ ಪಠ್ಯ ಬೋಧನೆ

ರಾಜ್ಯದಲ್ಲಿ ಐದು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಆರಂಭ

ಕ್ಷಿರಭಾಗ್ಯ ಯೋಜನೆಯಡಿ ವಾರದಲ್ಲಿ ಐದು ದಿನ ಹಾಲು ವಿತರಣೆ

ದಾವಣಗೆರೆ, ಕೋಲಾರ, ರಾಮನಗರದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ

8-10 ತರಗತಿ ವಿದ್ಯಾರ್ಥಿನಿಯರಿಗೆ ಚೂಡಿದಾರ, ಸಮವಸ್ತ್ರ ವಿತರಣೆ

ರಾಜ್ಯದಲ್ಲಿ 176 ಸಂಯೋಜಿತ ಕಾಲೇಜುಗಳ ಸ್ಥಾಪನೆ

ಖಾಸಗಿ ಸಂಸ್ಥೆಹಗಳಲ್ಲಿ ಎಸ್‌ಸಿ-ಎಸ್‌ಟಿ ಕಾರ್ಮಿಕರಿಗೆ ಉದ್ಯೋಗ

ವಿಶ್ವ ಕನ್ನಡ ಸಮ್ಮೇಳನ ಆಯೋಜನೆಗೆ 20 ಕೋಟಿ ರೂ. ಮೀಸಲು

ಕರಾವಳಿ ಭಾಗದಲ್ಲಿ ಪಶ್ಚಿಮ ವಾಹಿನಿ ಯೋಜನೆ ಜಾರಿ

ಗ್ರಾಮೀಣ ಪ್ರದೇಶದಲ್ಲಿ 2500 ಶುದ್ಧ ನೀರಿನ ಘಟಕ ಸ್ಥಾಪನೆ

ಅಮ್ಮಾ ಕ್ಯಾಂಟಿನ್ ಮಾದರಿಯಲ್ಲಿ ನಮ್ಮ ಕ್ಯಾಂಟಿನ್

5 ರೂ.ಗಳಿಗೆ ಬೆಳಗಿನ ತಿಂಡಿ, 10 ರೂ,ಗಳಿಗೆ ಊಟ ಸೌಲಭ್ಯ

ದುಬಾರಿ ದ್ವಿಚಕ್ರ ವಾಹನ ಕೊಳ್ಳುವವರಿಗೆ ಬರೆ

ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಗರಿಷ್ಠ ಟಿಕೆಟ್ ದರ 200 ರೂ.

ಬಿಯರ್ ಲಿಕ್ಕರ್, ಫೆನ್ನಿ, ವೈನ್, ಮೌಲ್ಯ ವರ್ಧಿತ ತೆರಿಗೆ ರದ್ದು

ಮದ್ಯದ ಮೇಲೆ ಹೆಚ್ಚುವರಿಯಾಗಿ ಅಬಕಾರಿ ಸುಂಕ

ಕನ್ನಡ ಚಿತ್ರೋದ್ಯಮದ ಅಭಿವೃದ್ಧಿಗೆ ಹಿಮ್ಮಾವು ಗ್ರಾಮದಲ್ಲಿ ಚಿತ್ರನಗರಿ ನಿರ್ಮಾಣ


ಬೆಂಗಳೂರು ಒನ್ ಮಾದರಿಯಲ್ಲಿ ಕರ್ನಾಟಕ ಓನ್ ಯೋಜನೆ

ರಾಜ್ಯದ 9 ಜಿಲ್ಲೆಗಳಲ್ಲಿ ಕರ್ನಾಟಕ ಒನ್ ಕೇಂದ್ರ ಆರಂಭ

ಹೈ-ಕ ಅಭಿವೃದ್ಧಿ ಮಂಡಳಿಗೆ 1500 ಕೋಟಿ ರೂಪಾಯಿ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸವಿರುಚಿ ಸಂಚಾರಿ ಕ್ಯಾಂಟಿನ್ 

ರಾಜ್ಯ ಅಬಕಾರಿ ಕಾಯ್ದೆಗೆ ತಿದ್ದುಪಡಿ

ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಉಚಿತ ವೈೃಫೈ

ರಾಜ್ಯದ ಬರ ಪೀಡಿತ ಪ್ರದೇಶಗಳಲ್ಲಿ 30 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಕಾರ್ಯ

 ನೀರಿನ ಟ್ಯಾಂಕರ್ ಖರೀದಿಸುವ ರೈತರಿಗೆ 50 ಸಾವಿರ ಸಹಾಯ ಧನ

ಸರಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ಆಯೋಗ ರಚನೆ

ಹನಿ ನೀರಾವರಿ ಅಳವಡಿಸಿಕೊಳ್ಳುವ ರೈತರಿಗೆ ಶೇ.90 ರಷ್ಟು ಸಬ್ಸಿಡಿ

ಕಾರವಾರ, ಮಡಿಕೇರಿ, ಚಿಕ್ಮೂಕಮಗಳೂರು ಜಿಲ್ಲೆಗಳಲ್ಲಿ ವಿಮಾನ ಇಳಿದಾಣ ನಿರ್ಮಾಣ

10 ಸಾವಿರ ಉತ್ಕ್ರಷ್ಠ ಟಗರು ಉತ್ಪಾದನಾ ಘಟಕ

ರಾಜ್ಯದ ಪ್ರತಿ ಮಾಂಸದಂಗಡಿಗೆ 1.25 ಲಕ್ಷ ರೂ ಸಹಾಯ ಧನ ನೆರವು


ಬಿಬಿಎಂಪಿ ವ್ಯಾಪ್ತಿಯಲ್ಲಿ 43 ಪ್ರಮುಖ ರಸ್ತೆಗಳ ಅಭಿವೃದ್ಧಿ

ಟೆಂಡರ್ ಶ್ಯೂರ್ ಮಾದರಿಯಲ್ಲಿ 25 ಕಿ.ಮೀ ರಸ್ತೆ ಅಭಿವೃದ್ಧಿ

690 ಕೋಟಿ ವೆಚ್ಚದಲ್ಲಿ ರಸ್ತೆಗಳು ಮೇಲ್ದರ್ಜೆಗೆ

250 ಕೋಟಿ ವೆಚ್ಚದಲ್ಲಿ ಟೆಂಡರ್ ಶ್ಯೂರ್ ರಸ್ತೆಗಳ ನಿರ್ಮಾಣ

2 ಸ್ಟ್ರೋಕ್ ಅಟೋಗಳ ರದ್ದತಿಗೆ ಕ್ರಮ

ಎಲ್‌ಪಿಜಿ ಅಟೋ ರಿಕ್ಷಾಗಳಿಗೆ 30 ಸಾವಿರ ರೂ.ಸಹಾಯ ಧನ

ಅಪಘಾತದಲ್ಲಿ ಹಸು ಎತ್ತು ಸಾವನ್ನಪ್ಪಿದರೆ 10 ಸಾವಿರ ರೂ.ಪರಿಹಾರ

10 ಸಾವಿರ ಅಟೋಗಳಿಗೆ ಇ-ಸಹಾಯ ಧನ

ರಾಜ್ಯದ 16 ಪ್ರರ್ವಾಸಿ ಕೇಂದ್ರಗಳು ವಿಶ್ವದರ್ಜೆಗೆ ಅಭಿವೃದ್ಧಿ

ಕರ್ನಾಟಕ ಶಾಲಾ ಶಿಕ್ಷಣ ನೀತಿ ಜಾರಿಗೆ ನಿರ್ಧಾರ

ಶ್ರವಣಬೆಳಗೊಳ ಮಹಾಮಸ್ತಾಭಿಷೇಕಕ್ಕೆ 175 ಕೋಟಿ ಅನುದಾನ

ಸಂಚಾರ ದಟ್ಟಣೆಯುಳ್ಳು 12 ಕಾರಿಡಾರ್ ಅಭಿವೃದ್ಧಿ


ನಮ್ಮ ಮೆಟ್ರೋ ಹೆಚ್ಚುವರಿ ಮಾರ್ಗ ನಿರ್ಮಾಣ

ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರಂ ವರೆಗೆ ಜಂಕ್ಷನ್‌ವರೆಗೆ ಮಾರ್ಗ ನಿರ್ಮಾಣ

ಕೃಷಿ ಕ್ಷೇತ್ರಕ್ಕೆ 5080 ಕೋಟಿ ರೂಪಾಯಿ ಮೀಸಲು

1626 ಪ್ರೌಢಶಾಲಾ ಶಿಕ್ಷಕರ ನೇಮಕ

ಬೆಂಗಳೂರು ಸಬ್ ಅರ್ಬನ್‌ ರೈಲ್ವೆ ಯೋಜನೆಗೆ 345 ಕೋಟಿ ರೂ.

ಖಾಸಗಿ ಸಂಸ್ಥೆಗಳಲ್ಲಿ ನಿವೃತ್ತಿ ವಯಸ್ಸು 58 ರಿಂದ 60ಕ್ಕೆ ಏರಿಕೆ

ರಾಯಚೂರಿನಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆ

ಪರಿಸರ ಸಂಶೋಧನೆಗಾಗಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ 5 ಕೋಟಿ ಅನುದಾನ

ಉಚಿತವಾಗಿ ನೀಡುತ್ತಿರುವ ವಿದ್ಯುತ್ ಪ್ರಮಾಣ ಹೆಚ್ಚಳ

ವೈದ್ಯಕೀಯ ಇಂಜಿನಿಯರಿಂಗ್, ಪಾಲಿಟೆಕ್ನಿಕ್ 1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್

ರಾಜ್ಯದ ಮೂರು ಪಟ್ಟಣಗಳಲ್ಲಿ ಹೊಸ ಆರ್‌ಟಿ ಓ ಕಚೇರಿಗಳ ಸ್ಥಾಪನೆ

ಕೃಷಿ ಭಾಗ್ಯ ಯೋಜನೆಗೆ 600 ಕೋಟಿ ರೂ.ಮೀಸಲು

ತೋಟಗಾರಿಕೆ ಇಲಾಖೆಗೂ ಕೃಷಿ ಭಾಗ್ಯ ಯೋಜನೆ ವಿಸ್ತರಣೆ

ತೋಟಗಾರಿಕೆ ಇಲಾಖೆಗೆ 1091 ಕೋಟಿ ರೂಪಾಯಿ ನಿಗದಿ

ಹೆಬ್ಬಾಳ್ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ನಿರ್ಮಾಣ

ಮೇಲ್ಸೇತುವೆ ಅಗಲೀಕರಣಕ್ಕೆ 88 ಕೋಟಿ ರೂ ಅನುದಾನ

150 ಕೋಟಿ ವೆಚ್ಚದಲ್ಲಿ 12 ಕಾರಿಡಾರ್ ಅಭಿವೃದ್ಧಿ

ರಾಜ್ಯದಲ್ಲಿ ಹೊಸ 6 ಮೆಡಿಕಲ್ ಕಾಲೇಜುಗಳ ಆರಂಭ

ಪೌಷ್ಠಿಕಾಂಶ ಕೊರತೆ ನಿವಾರಣೆಗೆ ಮಾತೃಪೂರ್ಣ ಯೋಜನೆಗಾಗಿ 302 ಕೋಟಿ ಮೀಸಲು

ಬೀದಜರ್ ಜಿಲ್ಲೆಯ ಹುಲಸೂರು ತಾಲೂಕು ಕೇಂದ್ರ ಘೋಷಣೆ

ಕೊಳಚೆ ಪ್ರದೇಶದ ನಿವಾಸಿಗಳಿಗೆ 10 ಸಾವಿರ ಲೀಟರ್ ಉಚಿತ ಶುದ್ಧ ನೀರು ವಿತರಣೆ

ರಾಜ್ಯದ 21 ಜಿಲ್ಲೆಗಳಲ್ಲಿ 49 ತಾಲೂಕು ಕೇಂದ್ರಗಳ ಘೋಷಣೆ

ರಾಜ್ಯದಲ್ಲಿ ಹೊಸದಾಗಿ 460 ಗ್ರಾಮ ಪಂಚಾಯಿತಿಗಳ ಆರಂಭ

ರಾಜ್ಯ ಎಲ್ಲಾ ಆಶಾ ಕಾರ್ಯಕರ್ತರಿಗೆ 1 ಸಾವಿರ ರೂ.ವಿಶೇಷ ಗೌರವ ಧನ

ಶೌಚಾಲಯಕ್ಕಾಗಿ ಸಮರ ಹೆಸರಲ್ಲಿ ಯೋಜನೆ ಜಾರಿ

ಸ್ವಚ್ಚ ಕರ್ನಾಟಕಕ್ಕಾಗಿ ಹೊಸ ಯೋಜನೆ

28 ಲಕ್ಷ ಶೌಚಾಲಾಯ ನಿರ್ಮಾಣ ಗುರಿ

ಒಲಿಂಪಿಕ್ ರಜತ ಪದಕ ವಿಜೇತರಿಗೆ 3 ಕೋಟಿ ರೂ. ಬಹುಮಾನ

60 ರಿಂದ 64 ವಯಸ್ಸಿನವರಿಗೆ ವೃದ್ಧಾಪ ವೇತನ 200 ರೂ.ದಿಂದ 500 ರೂ ಗೆ ಹೆಚ್ಚಳ

ಸ್ಮಾರ್ಟ್ ಸಿಟಿ ಯೋಜನೆಯಡಿ 800 ಕೋಟಿ ಅನುದಾನ

ಜಿಪಂ ಸದಸ್ಯರ ಗೌರವ ಧನ 3 ಸಾವಿರ ದಿಂದ 5 ಸಾವಿರಕ್ಕೆ ಏರಿಕೆ

ತಾಪಂ ಸದಸ್ಯರ ಗೌರವ ಧನ 4.5 ಸಾವಿರದಿಂದ 6 ಸಾವಿರಕ್ಕೆ ಏರಿಕೆ

ಗ್ರಾಪಂ ಸದಸ್ಯರ  ಗೌರವ ಧನ 1 ಸಾವಿರದಿಂದ 3 ಸಾವಿರಕ್ಕೆ ಏರಿಕೆ

ಜನಪ್ರತಿನಿಧಿಗಳ ಗೌರವ ಧನ ಹೆಚ್ಚಿಸಿದ ಸರಕಾರ

ಉಚಿತ ವಿದ್ಯುತ್ ವಿಚರಣೆ ಪ್ರಮಾಣ 18 ಯುನಿಟ್‌ನಿಂದ 40 ಯುನಿಟ್‌ಗೆ ಏರಿಕೆ

16,500 ನರ್ಸ್‌ಗಳಿಗೆ ಕಂಪ್ಯೂಟರ್ ಟ್ಯಾಬ್ ವಿತರಣೆ

ಬೆಂಗಳೂರಿನ ಆಯ್ದ ಭಾಗಗಳಲ್ಲಿ ಬಾಡಿಗೆ ಸೈಕಲ್ ಒದಗಿಸುವ ಯೋಜನೆ

ಗ್ರಾಮಗಳಲ್ಲಿ ಸಮುದಾಯ ದನದ ಕೊಟ್ಟಿಗೆ ನಿರ್ಮಾಣ

ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಮಣ್ಣಿನ ರಸ್ತೆ ನಿರ್ಮಾಣ

ರಾಜ್ಯದಾದ್ಯಂತ 4023 ಬಾಪೂಜಿ ಸೇವಾ ಕೇಂದ್ರ ಆರಂಭ

ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್‌ಗೆ 25 ಕೋಟಿ ಅನುದಾನ

144 ತಾಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ

ಶಬರಿಮಲೈದಲ್ಲಿ ಕರ್ನಾಟಕದ ಉಪ ಕಚೇರಿ ಆರಂಭ

10 ಕೋಟಿ ವೆಚ್ಚದಲ್ಲಿ ವೆಲ್‌ಲಾಕ್ ಆಸ್ಪತ್ರೆ ಮೇಲ್ದರ್ಜೆಗೆ

5310 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ

ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದವರಿಗೆ 2 ಕೋಟಿ ರೂ ಬಹುಮಾನ

1 ಲಕ್ಷ ರೂಗಿಂತ ಹೆಚ್ಚಿನ ದರದ ದ್ವಿಚಕ್ರ ವಾಹನಗಳ ತೆರಿಗೆ ಹೆಚ್ಚಳ


ಕೋಲಾರ ಜಿಲ್ಲೆ ಕೆಜಿಎಫ್‌ ತಾಲೂಕು ಕೇಂದ್ರವಾಗಿ ಘೋಷಣೆ

28 ಲಕ್ಷ ಶೌಚಾಲಯ ನಿರ್ಮಾಣಕ್ಕೆ ಕ್ರಮ

ಒಪಿಂಪಿಕ್ ಪದಕ ವಿಜೇತರಿಗೆ ಎ ಗ್ರೂಪ್ ಹುದ್ದೆ

ಒಲಿಂಪಿಕ್ ಸ್ವರ್ಣ ಪದಕ ವಿಜೇತರಿಗೆ 5 ಕೋಟಿ ರೂ ಬಹುಮಾನ

ರಾಜ್ಯ ಸರಕಾರದ ತೆರಿಗೆ ಸಂಗ್ರಹದ ಮೇಲೆ ನೋಟ್ ಬ್ಯಾನ್ ಎಫೆಕ್ಟ್

ನೋಟ್‌ಬ್ಯಾನ್‌ನಿಂದ ಶೇ.25 ರಷ್ಟು ಆಸ್ತಿ ನೋಂದಣಿಯಲ್ಲಿ ಇಳಿಕೆ

ನೋಟ್‌ಬ್ಯಾನ್‌ನಿಂದ 1350 ಕೋಟಿ ತೆರಿಗೆ ಸಂಗ್ರಹದಲ್ಲಿ ನಷ್ಟ

ಎಸ್‌ಸಿ, ಎಸ್‌ಟಿ ವಿಧುವೆಯರ ಮರುವಿವಾಹಕ್ಕೆ 3 ಲಕ್ಷ ರೂ ಪ್ರೋತ್ಸಾಹ ಧನ

ರೈತರಿಗೆ  ತರಬೇತಿ 
ಕಲಿಕಾ ಲೈಸೆನ್ಸ್ ನೀಡುವ ಯೋಜನೆ

ಖಾಸಗಿ ವಲಯದ ಉದ್ಯಮಗಳಲ್ಲಿ ಸಿ ಮತ್ತು ಡಿ ದರ್ಜೆಯ ವಿಭಾಗದಲ್ಲಿ ಷೇ.100 ರಷ್ಟು ಕನ್ನಡಿಗರಿಗೆ ಮೀಸಲಾತಿ.

ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ವಿಜೇತರಿಗೆ ಬಿ ಗ್ರೂಪ್ ಹುದ್ದೆ 

ಐಐಟಿ, ಐಐಸಿಎಸ್ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ

ಬೀದರ್ ಜಿಲ್ಲೆಯ ಹುಲಸೂರು, ಚಿಟಗುಪ್ಪಾ, ಕಮಲನಗರ್ ತಾಲೂಕು ಕೇಂದ್ರಗಳಾಗಿ ಘೋಷಣೆ

ಎಸ್‌ಸಿ, ಎಸ್‌ಟಿ ಪಂಗಡದೊಳಗಿನಿ ಅಂತರ್ಜಾತಿ ವಿವಾಹಕ್ಕೆ 2 ಲಕ್ಷ ರೂ ನೆರವು


99 ವರ್ಷಗಳ ಗುತ್ತಿಗೆ ಅವಧಿ 10 ವರ್ಷಕ್ಕೆ ಇಳಿಕೆ

ಮಹಿಳಾ ಉದ್ಯಮಿಗಳಿಗೆ ಶೇ.4ರ ಬಡ್ಡಿದರದಲ್ಲಿ ನೀಡಲಾಗುವ ಸಾಲದ ಮಿತಿ 50 ಲಕ್ಷದಿಂದ 2 ಕೋಟಿಗೆ ಏರಿಕೆ

ಬೀಜ ಧನ್ ಬಂಡವಾಳ ಯೋಜನೆಯಡಿ ಪಡೆದ ಸಾಲ ಮನ್ನಾ

ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು

ಸಕಾಲ ಯೋಜನೆಯಡಿ 15 ದಿನಗಳೊಳಗಾಗಿ ಸ್ಪೀಡ್‌ಪೋಸ್ಟ್ ಮೂಲಕ ಹೊಸ ಪಡಿತರ ಚೀಟಿ ವಿತರಣೆ

ಗ್ರಾಮೀಣ ಪ್ರದೇಶದಲ್ಲಿ ರೈತರಿಗಾಗಿ ಸಾರಥಿ ಯೋಜನೆ ಜಾರಿ


ಮಾಹಿತಿ ತಂತ್ರಜ್ಞಾನ ಬಳಸಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷಾ ಸುಧಾರಣೆ

ಶಿಕ್ಷಣ ಕಿರಣ ಯೋಜನೆಯಡಿ ಬಯೋಮೆಟ್ರಿಕ್ ವ್ಯವಸ್ಥೆ

ಬೀದರ್ ಚಿಕ್ಕಮಗಳೂರು, ತರಿಕೇರಿಯಲ್ಲಿ ಕಾರಾಗೃಹ ನಿರ್ಮಾಣ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಸಿಎಂ ಸಿದ್ದರಾಮಯ್ಯರಿಂದ ಬಹುನಿರೀಕ್ಷಿತ ರಾಜ್ಯ ಬಜೆಟ್ ಮಂಡನೆ: