ರಿಡೂ, ಡಿನೋಟಿಫಿಕೇಷನ್ ಪರಿಶೀಲನೆಗೆ ಸಮಿತಿ ರಚಿಸಬೇಕೆಂದು ತಿಳಿಸಿರುವ ಕೋರ್ಟ್, ಸುಪ್ರೀಂಕೋರ್ಟ್ ತೀರ್ಪಿಗೆ ಬದ್ಧವಾಗಿ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪರಿಶೀಲಿಸುವಂತೆ ಸೂಚಿಸಿದೆ. ನಿವೃತ್ತ ನ್ಯಾ.ಕೆ.ಎನ್.ಕೇಶವನಾರಾಯಣ, ನಿವೃತ್ತ ಐಎಎಸ್ ಅಧಿಕಾರಿ ಸಂದೀಪ್ ದವೆ, ನಿವೃತ್ತ ಪೊಲೀಸ್ ಅಧಿಕಾರಿ ಎನ್.ಎಸ್.ಮೇಘರಿಕ್ ತ್ರಿಸದಸ್ಯ ಸಮಿತಿಯನ್ನು ಕೋರ್ಟ್ ರಚಿಸಿದೆ. ಸಮಿತಿ 16 ಹಳ್ಳಿಗಳ ಭೂಸ್ವಾಧೀನವನ್ನು ಪರಿಶೀಲನೆ ನಡೆಸಲಿದ್ದು, ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ಹಂಚಿಕೆಯಾದ ಜನರಿಗೆ ನಿವೇಶನ ಒದಗಿಸಬೇಕು. ಹಂಚಿಕೆಯಾದವರಿಗೆ ಮಾರಾಟ ಒಪ್ಪಂದ ಮಾಡಿಕೊಡಬೇಕು. 2003 ಫೆಬ್ರವರಿ 3ಕ್ಕಿಂತ ಮೊದಲಿರುವ ಮನೆಗಳು ಪಕ್ಕಾ ಕಟ್ಟಡಗಳಾಗಿದ್ದರೆ ಮಾತ್ರ ಉಳಿಯಲಿವೆ. ಆದರೆ ಸಿಮೆಂಟ್ ಶೀಟ್, ಹಂಚಿನ ಚಾವಣಿ ಹೊಂದಿರುವ ಕಟ್ಟಡಗಳನ್ನು ಪಕ್ಕಾ ಕಟ್ಟಡಗಳೆಂದು ಪರಿಗಣಿಸಲಾಗಿಲ್ಲ. ಈ ಬಗ್ಗೆಯೂ ಬಿಡಿಎಗೆ ವರದಿ ನೀಡಲು ಸಮಿತಿಗೆ ಸೂಚಿಸಲಾಗಿದೆ.