Webdunia - Bharat's app for daily news and videos

Install App

ಇಲ್ಲೇ ಇರುತ್ತೇವೆ, ಮನೆಗೆ ಮರಳುವುದಿಲ್ಲ ಎನ್ನುತ್ತಿರುವ ಜನರು

Webdunia
ಮಂಗಳವಾರ, 12 ಮೇ 2020 (15:15 IST)
ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಲಾಕ್‍ಡೌನ್ ಹಿನ್ನಲೆಯಲ್ಲಿ ವಲಸಿಗರು ತಮ್ಮ ರಾಜ್ಯ, ಜಿಲ್ಲೆ ಗಳಿಗೆ ವಲಸೆ ಹೋಗುವುದನ್ನು ಕೈಬಿಟ್ಟಿದ್ದಾರೆ.

ಮೂರನೇ ಹಂತದ ಲಾಕ್‍ಡೌನ್ ಸಮಯದಲ್ಲಿ ಒಂದಿಷ್ಟು ಸಡಿಲಿಕೆ ಘೋಷಣೆ ಮಾಡಿರುವುದರಿಂದ ಅನೇಕ ವಲಸಿಗರು ಈಗ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದಾರೆ.

ಗಣಿನಾಡು ಬಳ್ಳಾರಿಯ ವಿಶಾಲ ನಗರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿರುವ ಉತ್ತರ ಭಾರತದ ಕರಕುಶಲ ಕರ್ಮಿಗಳ ಐದು ಜನರ ಗುಂಪೊಂದು  ಮದುವೆ ಮೊದಲಾದ ಸಮಾರಂಭಗಳಲ್ಲಿ ಮಹಿಳೆಯರ ವಸ್ತ್ರಗಳಿಗೆ ಕಸೂತಿ ಕಲೆ ಮಾಡುತ್ತಾ ತಮ್ಮ ದುಡಿಮೆ ಕಂಡು ಕೊಂಡಿದ್ದರು.

ಆದರೆ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್ ಜಾರಿ ಬಳಿಕ ಇವರಿಗೆ ಕೆಲಸ ಇಲ್ಲದಂತಾಗಿತ್ತು.  
ದುಡಿದಿಟ್ಟುಕೊಂಡಿದ್ದ ಹಣದಲ್ಲಿ ಕೆಲಸವಿಲ್ಲದೆ ಒಂದುವರೆ ತಿಂಗಳು ಬದುಕಿದ್ದರು. ಲಾಕ್ ಡೌನ್ ಯಾವಾಗ ಮುಗಿಯುತ್ತೆ, ನಮಗೆ ದುಡಿಮೆ ಸಿಗುತ್ತೋ ಎಂದು ತಮ್ಮ ಊರುಗಳಿಗೆ ತೆರಳು ನಿರ್ಧರಿಸಿದ್ದರು.

ಆದರೆ ಮೂರನೇ ಹಂತದ ಲಾಕ್ ಡೌನ್ ಸಮಯದಲ್ಲಿ ಒಂದಿಷ್ಟು ಸಡಿಲಿಕೆ ಮಾಡಿದ್ದರಿಂದ. ಮತ್ತೆ ಜನರಿಂದ ಅವರಿಗೆ ಒಂದಿಷ್ಟು ಕೆಲಸ ದೊರೆತಿದ್ದು, ವಲಸೆ ಹೋಗುವುದನ್ನು ಕೈಬಿಟ್ಟಿದ್ದೇವೆ ಎಂದು ಸಂತೂ ಬಾರಿಕ್, ಎಸ್.ಕೆ.ಎಂತಜುಲ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments