Select Your Language

Notifications

webdunia
webdunia
webdunia
webdunia

2500 ಕೋಟಿ ರೂ.ಮೌಲ್ಯದ ಹೆರಾಯಿನ್ ವಶ: ಆಫ್ಘಾನ್ ಪ್ರಜೆ ಅರೆಸ್ಟ್!

bangalore
bangalore , ಶನಿವಾರ, 10 ಜುಲೈ 2021 (19:13 IST)
ಭಾರತೀಯ ಇತಿಹಾಸದಲ್ಲೇ ಗರಿಷ್ಠ ಎನ್ನಬಹುದಾದ 350 ಕೆಜಿ ಅಂದರೆ ಸುಮಾರು 2500 ಕೋಟಿ ರೂ. ಮೌಲ್ಯದ ಹೆರಾಯಿನ್ ಅವರನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಫ್ಫಾನಿಸ್ತಾನ, ಯುರೋಪ್ ಮುಂತಾದ ದೇಶಗಳಿಂದ ಭಾರೀ ಪ್ರಮಾಣದ ಮಾದಕವಸ್ತು ಬರುತ್ತಿದೆ ಎಂಬ ಸುಳಿವಿನ ಮೇರೆಗೆ ದೆಹಲಿ ಪೊಲೀಸರು ಫರಿದಾಬಾದ್ ನಲ್ಲಿ ದಾಳಿ ನಡೆಸಿ ಇಷ್ಟು ದೊಡ್ಡ ಪ್ರಮಾಣದ ಹೆರಾಯಿನ್ ಬೇಟೆಯಾಡಿದ್ದಾರೆ.
ದಾಳಿ ವೇಳೆ ಆಫ್ಘಾನಿಸ್ತಾನ ಮೂಲದ ಅರ್ಜತ್ ಅಲಿ, ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ನಿವಾಸಿ ರಿಜ್ವಾನ್ ಅಹ್ಮದ್, ಪಂಜಾಬ್ ಜಲಂಧರ್ ನ ಗುರ್ಜೊತ್ ಸಿಂಗ್ ಸೇರಿದಂತೆ ನಾಲ್ವರನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು ಉಳಿದ ಆಯಾಮದ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಹೆರಾಯಿನ್ ತಯಾರಿಸಲು 100ಕ್ಕೂ ಹೆಚ್ಚು ರಾಸಯನಿಕ ಬಳಸಲಾಗಿದೆ. ಇದನ್ನು ಪಂಜಾಬ್ ಗೆ ರವಾನಿಸಲು ಉದ್ದೇಶಿಸಲಾಗಿದ್ದು, ಇದರ ಅಂತಾರಾಷ್ಟ್ರೀಯ ಮೌಲ್ಯ 2500 ಕೋಟಿ ರೂ.ಗೂ ಅಧಿಕ ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವದ ಕರೋನಾ ಪಿಡುಗಿನ ವಿರುದ್ದದ ಹೋರಾಟದಲ್ಲಿ ಭಾರತದ ಔಷಧ ಕ್ಷೇತ್ರದ ಕೊಡುಗೆ ಅಪಾರ