ಪತ್ನಿಯ ಅಂತ್ಯಸಂಸ್ಕಾರದ ವೇಳೆಯಲ್ಲಿ ಪತಿಗೆ ಆಗಿದ್ದನ್ನು ನೋಡಿದ್ರೆ ಬೆಚ್ಚಿಬೀಳ್ತಿರಾ…

Webdunia
ಸೋಮವಾರ, 26 ನವೆಂಬರ್ 2018 (18:21 IST)
ಬೆಂಕಿ ಹಚ್ಚಿಕೊಂಡು ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಹಿಳೆಯ ಅಂತ್ಯ ಸಂಸ್ಕಾರದ ವೇಳೆ ಮೃತಳ ಸಂಬಂಧಿಕರು ಮಾಡಿದ್ದನ್ನು ನೋಡಿದರೆ ಶಾಕ್ ಆಗ್ತೀರಾ….

ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯ ಅಂತ್ಯ ಸಂಸ್ಕಾರದ ವೇಳೆಯಲ್ಲಿಯೇ ಮೃತಳ ಪತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತ ಮಹಿಳೆಯ ಪೋಷಕರು ಹಾಗೂ ಸಂಬಂಧಿಕರಿಂದ ಕೃತ್ಯ ನಡೆದಿದೆ.

ವಿಜಯಪುರ ತಾಲೂಕಿನ ಖಿಲಾರಹಟ್ಟಿ ಗ್ರಾಮದ ಸ್ಮಶಾನದಲ್ಲಿ ರಾತ್ರಿ ಘಟನೆ ನಡೆದಿದೆ. ಮಹಾರಾಷ್ಟ್ರದ ಸಿಂದದುರ್ಗ ಜಿಲ್ಲೆಗೆ ಗುಳೆ ಹೋಗಿದ್ದ ಕುಟುಂಬದಲ್ಲಿ ಗೃಹಿಣಿ ಕಾಜಲ್ ತಾಂಬೆ (20) ಬೆಂಕಿ‌ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
ರಾತ್ರಿ ಕಾಜಲ್  ಶವ ಅಂತ್ಯ ಸಂಸ್ಕಾರಕ್ಕೆ ಖಿಲಾರಹಟ್ಟಿಗೆ ತರಲಾಗಿತ್ತು. ಅಂತ್ಯ ಸಂಸ್ಕಾರದ ವೇಳೆ ಕಾಜಲ್ ಪೋಷಕರು ಹಾಗೂ ಸಂಬಂಧಿಕರಿಂದ ಪತಿ ರಾಜುನನ್ನು ಕೊಲೆ ಮಾಡಲಾಗಿದೆ. ಅಂತ್ಯ ಸಂಸ್ಕಾರಕ್ಕೆ ತಂದಿದ್ದ ಕಟ್ಟಿಗೆ ಹಾಗೂ ಕಲ್ಲುಗಳಿಂದ ಜಜ್ಜಿ ಕೊಲೆ ಮಾಡಲಾಗಿದೆ. ರಾಜು ತಾಂಬೆ (23) ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ರಾಜು ಕಿರುಕುಳದಿಂದಲೇ ಕಾಜಲ್ ಬೆಂಕಿ ಹಚ್ಚಿಕೊಂಡಿರುವ ಆರೋಪ ಕೇಳಿಬಂದಿದೆ. ಹಲ್ಲೆ ತಡೆಯಲು ಬಂದಿದ್ದ ರಾಜೂ‌ ಸಹೋದರ ಸಂಜಯ ಮೇಲೂ ಹಲ್ಲೆ ನಡೆದಿದೆ. ತೀವ್ರಗಾಯಗೊಂಡ ಸಂಜಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಜು ಕೊಲೆಯ‌‌ ಮಧ್ಯೆಯೇ ತರಾತುರಿಯಲ್ಲಿ ತಡರಾತ್ರಿ ಕಾಜಲ್ ಅಂತ್ಯ ಸಂಸ್ಕಾರ ನಡೆದಿದೆ. ಸಧ್ಯ ಪರಾರಿಯಾಗಿರುವ ರಾಜು ಕೊಲೆ ಮಾಡಿರುವ ಆರೋಪಿಗಳನ್ನು ಬಬಲೇಶ್ವರ ಪೊಲೀಸ್ ಠಾಣೆಯ  ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಬರಿಮಲೆ ಸುತ್ತಲಿನ ವಿವಾದ ಭಕ್ತರಿಗೆ ಯಾವುದೇ ಪರಿಣಾಮ ಬೀರಿಲ್ಲ: ಟಿಡಿಬಿ

ಪಾಕ್‌ನ ಮೂಲೆ ಮೂಲೆಗೂ ನುಗ್ಗುವ ಸಾಮರ್ಥ್ಯ ಭಾರತದ ಬ್ರಹ್ಮೋಸ್ ಕ್ಷಿಪಣಿಗಿದೆ: ರಾಜನಾಥ ಸಿಂಗ್

ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಸಸ್ಪೆಂಡ್: ಅಧಿಕಾರಿ ಬಗ್ಗೆ ತೇಜಸ್ವಿ ಸೂರ್ಯ ಬಿಗ್ ನಿರ್ಧಾರ

ನೊಬೆಲ್ ಪ್ರಶಸ್ತಿ ವಿಜೇತ ಚೀನಾದ ಶತಾಯುಷಿ ಚೆನ್ ನಿಂಗ್ ಯಾಂಗ್ ಇನ್ನಿಲ್ಲ

ಮತಕ್ಕಾಗಿ ಮುಸ್ಲಿಮರನ್ನು ನಿಂದಿಸುವ ಬಿಜೆಪಿ ನಾಯಕರಿಗೆ ಮುಸ್ಲಿಂ ಅಳಿಯನಿದ್ದಾನೆ: ಭೂಪೇಶ್‌ ಬಾಘೇಲ್‌

ಮುಂದಿನ ಸುದ್ದಿ
Show comments