Select Your Language

Notifications

webdunia
webdunia
webdunia
webdunia

ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ

Heavy rains in the northern and southern parts of the state
bangalore , ಭಾನುವಾರ, 10 ಅಕ್ಟೋಬರ್ 2021 (21:54 IST)
ಬೆಂಗಳೂರು: ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಿದ್ದು, ಕೆಲವೆಡೆ ಕೆರೆಗಳು ಭರ್ತಿಯಾಗಿವೆ.
ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಕೆರೆಯಲ್ಲಿ ಕಳೆದ ಐವತ್ತು ವರ್ಷಗಳಿಂದ ಹನಿ ನೀರಿರಲಿಲ್ಲ. ಕಳೆದ ಐದಾರು ದಿನಗಳಿಂದ ಮಳೆಯಾಗುತ್ತಿದ್ದು, ಕೆರೆ ಭರ್ತಿಯಾಗಿದೆ. ಕೊಪ್ಪಳ ದಲ್ಲಿ ಸಜ್ಜೆ ಬೆಳೆಯು ಮಳೆ -  ಗಾಳಿಯಿಂದ ನೆಲಕ್ಕೆ ಉರುಳಿದೆ.
ಯಾದಗಿರಿಯ ಮೋಟ್ನಳ್ಳಿ ಗ್ರಾಮದಲ್ಲಿ ಮಳೆಗೆ ನಾಲ್ಕೈದು ಮನೆಗಳು ಕುಸಿದಿವೆ. ಕೆಲ ಮನೆಗಳು ಭಾಗಶಃ ಹಾನಿಯಾಗಿವೆ. ಹೊಲಗಳಿಗೆ ಮಳೆ ನೀರು ನುಗ್ಗಿ ಭತ್ತ, ಹತ್ತಿ, ಶೇಂಗಾ ಬೆಳೆಗಳು ನಾಶವಾಗಿವೆ.
 
ಭಾನುವಾರ ಕಲಬುರಗಿ ಮಹಾನಗರ ಸೇರಿದಂತೆ ತಾಲೂಕಿನ ವಿವಿಧೆಡೆ ವರುಣ ಆರ್ಭರ್ ಮುಂದುವರಿದಿದೆ. ನಗರದ ಬ್ರಹ್ಮಪುರ, ಲಾಳಗೇರಿ ಕ್ರಾಸ್, ಸೋನಿಯಾ ಗಾಂಧಿ ಕಾಲೊನಿ, ಶಾಂತಿನಗರ, ಪ್ರಶಾಂತ ನಗರ, ವೆಂಕಟೇಶ್ವರ ನಗರ, ಎಸ್.ಬಿ. ಟೆಂಪಲ್, ಗುಲಾಬವಾಡಿ, ಎಪಿಎಂಸಿ ಪ್ರದೇಶ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ.  ಚರಂಡಿಗಳು ತುಂಬಿಕೊಂಡು ಕೊಚ್ಚೆ ಸಮೇತ ಮಳೆ ನೀರು ರಸ್ತೆಗಳ ಮೇಲೆ ಹೊಳೆಯಂತೆ ಹರಿಯಿತು.
ಉಕ್ಕೇರಿದ ಮುಲ್ಲಾಮಾರಿ ನದಿ:
ಚಿಂಚೋಳಿ ತಾಲೂಕಿನಲ್ಲಿ ನಾಲ್ಕೈದು ದಿನಗಳಿಂದ  ನಿರಂತರವಾಗಿ ಮಳೆ ಸುರಿದಿದೆ. ಇದರಿಂದ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದೆ. ನೀರಿನ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ನಾಗರಾಳ ಜಲಾಶಯದಿಂದ ನದಿಗೆ ನೀರು ಬಿಡಲಾಗಿದೆ. ಇದರಿಂದ ಮುಲ್ಲಾಮಾರಿ ನದಿಯಲ್ಲಿ ಪ್ರವಾಹ ಭೀತಿ ಉಂಟಾಗಿದೆ. 
ಎರಡು ದಿನ ಭಾರೀ ಮಳೆ:
ಸೋಮವಾರ ಮತ್ತು ಮಂಗಳವಾರ ಉತ್ತರ ಕನ್ನಡ, ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ. ಮೈಸೂರು, ಹಾಸನ, ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಪಾವಗಡ ದಾವಣಗೆರೆ ಜಿಲ್ಲೆಯ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರಿ ಹಿಂದೂ ಸಾಂಸ್ಕತಿಕ ಕಲ್ಯಾಣ ಟ್ರಸ್ಟ್ ನ ಸದಸ್ಯರು ಜ ಕಾಶ್ಮೀರ ಭವನ ಮುಂಭಾಗ ಪ್ರತಿಭಟನೆ