Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ ಭಾರೀ ಮಳೆ: ಓರ್ವನ ಸಾವು

ಬೆಂಗಳೂರಲ್ಲಿ ಭಾರೀ ಮಳೆ: ಓರ್ವನ ಸಾವು
Bangalore , ಭಾನುವಾರ, 21 ಮೇ 2017 (04:01 IST)
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೆ ವರುಣನ ಅಬ್ಬರ. ನಿನ್ನೆ ರಾತ್ರಿ ಸುರಿದ ಮಳೆಗೆ ಜನರು ಪರದಾಡುವಂತಾಗಿದ್ದು, ಯುವಕನೋರ್ವ ರಾಜಾಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆಯೂ ವರದಿಯಾಗಿದೆ.

 
ಕುರುಬರಹಳ್ಳಿ, ಜೆ.ಸಿ. ನಗರದಲ್ಲಿ  24 ವರ್ಷದ ರಾಜ್ ಕುಮಾರ್ ಎಂಬಾತ ರಾಜಾಕಾಲುವೆಗೆ ಬಿದ್ದು ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಮೇಯರ್ ಜಿ. ಪದ್ಮಾವತಿ ಭೇಟಿ ಕೊಟ್ಟಿದ್ದಾರೆ. ಈತ ಇಲ್ಲಿ ಗೋಡೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

ಉಳಿದಂತೆ ಮೆಜೆಸ್ಟಿಕ್,  ಕಾರ್ಪೋರೇಷನ್, ಯಶವಂತಪುರದಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಸದಾಶಿವ ನಗರ, ಲಗ್ಗೆರೆಯಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಆನಂದ್ ರಾವ್, ಡಬಲ್ ರೋಡ್ ನಲ್ಲಿ ಮರಗಳು ಧರೆಗುರುಳಿದ್ದು, ಪಾರ್ಕಿಂಗ್ ಮಾಡಿದ್ದ ವಾಹನಗಳು ಜಖಂಗೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟರೇ ನನ್ನ ಪುತ್ರ ಅನುರಾಗ್ ತಿವಾರಿ ಹತ್ಯೆ ಮಾಡಿದ್ದಾರೆ: ಅಲೋಕ್ lತಿವಾರಿ