Publish Date: Sat, 20 Apr 2019 (15:22 IST)
Updated Date: Sat, 20 Apr 2019 (15:23 IST)
ಭಾರಿ ಮಳೆಗೆ ರಾಜಧಾನಿಯ ಕೆಲವು ಪ್ರದೇಶಗಳು ತತ್ತರಗೊಂಡಿವೆ. ರಾಜಕಾಲುವೆ ಅಲ್ಲಲ್ಲಿ ಬ್ಲಾಕ್ ಆಗಿದ್ದು ಜನರನ್ನು ಇನ್ನಷ್ಟು ಹೈರಾಣಾಗುವಂತೆ ಮಾಡಿದೆ.
ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ಮಳೆ ಬಿದ್ದು ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿ ವ್ಯಾಪ್ತಿಯ ರುಕ್ಮಿಣಿನಗರದ ಸೆಂಟ್ ಮೇರಿಸ್ ಹೈಸ್ಕೂಲ್ಗೆ ರಾಜಕಾಲುವೆ ನೀರು ನುಗ್ಗಿ ಲ್ಯಾಬ್, ಸ್ಮಾರ್ಟ್ ಬೋರ್ಡ್ ಸೇರಿದಂತೆ ಪಠ್ಯ ಪುಸ್ತಕ ಸಾಮಗ್ರಿಗಳು ಹಾನಿಗೊಳಗಾಗಿವೆ.
ಟಿ.ದಾಸರಹಳ್ಳಿ ಶಾಸಕ ಆರ್.ಮಂಜುನಾಥ್ ಸೇರಿದಂತೆ ಬಿಬಿಎಂಪಿ ಇಂಜಿನಿಯರ್ ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಬಿಬಿಎಂಪಿ ಅಧಿಕಾರಿಗಳಿಗೆ ಕಾಲುವೆಗಳ ದುರಸ್ತಿ ಬಗ್ಗೆ ಸೂಚನೆ ನೀಡಲಾಯಿತು.
ಸಾಕಷ್ಟು ಭಾಗಗಳಲ್ಲಿ ರಾಜಕಾಲುವೆ ಬ್ಲಾಕ್ ನಿಂದ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ. ಈ ಸಂಬಂಧ ಬಿಬಿಎಂಪಿ ಅಧಿಕಾರಗಳ ಸಭೆ ಕರೆದು ಸಮಸ್ಯೆ ಬಗೆ ಹರಿಸೋದಾಗಿ ಮಾಧ್ಯಮಗಳಿಗೆ ಶಾಸಕ ಆರ್.ಮಂಜುನಾಥ್ ಹೇಳಿಕೆ ನೀಡಿದ್ರು.