ಈ ಕಾರಣಕ್ಕೆ ಪ್ರೀತಿಸುತ್ತಿದ್ದ ಹುಡುಗಿಯ ತಂದೆಯನ್ನೇ ಕೊಂದ

Webdunia
ಗುರುವಾರ, 8 ಅಕ್ಟೋಬರ್ 2020 (08:27 IST)
ಕಲಬುರಗಿ : ಪ್ರಕರಣ ದಾಖಲಿಸಿದ್ದಕ್ಕೆ ಪ್ರೀತಿಸುತ್ತಿದ್ದ ಹುಡುಗಿಯ ತಂದೆಯನ್ನು  21 ವರ್ಷದ ಯುವಕ ಹಾಗೂ ಆತನ ಸ್ನೇಹಿತ ಕೊಲೆ ಮಾಡಿದ ಘಟನೆ ಕಮಲಾಪುರ ತಾಲೂಕಿನ ದಿನಸಿ ತಾಂಡಾದಲ್ಲಿ ನಡೆದಿದೆ.

ಮಹೇಶ್ ಮತ್ತು ಸುಭಾಷ್ ರಾಥೋಡ್ ಕೊಲೆ ಮಾಡಿದ ಆರೋಪಿಗಳು. ಆರೋಪಿ ಮಹೇಶ್  ಮೃತಪಟ್ಟ ವ್ಯಕ್ತಿಯ ಹದಿಹರೆಯದ ಮಗಳಿಗೆ  ಪ್ರೀತಿಯ ವಿಚಾರಲ್ಲಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ತಂದೆ ಅವನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಮಹೇಶ್ ಅವರ ಮಗಳನ್ನು ಮದುವೆಯಾಗುವುದಾಗಿ ಹೇಳಿ ದೂರು ವಾಪಾಸ್ ಪಡೆಯುವಂತೆ ಹೇಳಿದ್ದು,  ಅದರಂತೆ ತಂದೆ ದೂರು ವಾಪಾಸ್ ಪಡೆದಿದ್ದರು.

ಆದರೆ ಬಳಿಕ ಆರೋಪಿಯ ಬಳಿ ಮದುವೆ ಪ್ರಸ್ತಾಪ ಮಾಡಿದಾಗ ಆತ ನಿರಾಕರಿಸಿದ್ದಾನೆ. ಆದಕಾರಣ ಹುಡುಗಿಯ ತಂದೆ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ತನ್ನ ಸ್ನೇಹಿತನ ಜೊತೆ ಮನೆಗೆ ನುಗ್ಗಿದ ಮಹೇಶ್ ಹುಡುಗಿಯ ತಂದೆಯನ್ನು ಕೊಲೆ ಮಾಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೈಡ್ ಇಫೆಕ್ಟ್ ಇರುವ ಔಷಧಿ ತೆಗೆದುಕೊಳ್ಳಬಾರದೇ, ಡಾ ಸಿಎನ್ ಮಂಜುನಾಥ್ ಟಿಪ್ಸ್

Gold price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಉಡುಪಿ ಕೃಷ್ಣನ ಭೇಟಿಗೆ ಬರಲಿದ್ದಾರೆ ಪ್ರಧಾನಿ ಮೋದಿ

ಅಣ್ಣನೂ ಸಿಎಂ ಆಗಬೇಕು ಎನ್ನೋದೇ ನನ್ನಾಸೆ: ಡಿಕೆ ಸುರೇಶ್

ಮುಂದಿನ ಸುದ್ದಿ
Show comments