Publish Date: Thu, 27 Jan 2022 (15:55 IST)
Updated Date: Thu, 27 Jan 2022 (15:59 IST)
ಸಿಎಂ ಇಬ್ರಾಹಿಂ ಅವರು ಜೆಡಿಎಸ್ ಪಕ್ಷಕ್ಕೆ ಬಂದರೆ ಗೌರವ ಸ್ಥಾನಮಾನ ಕೊಡುತ್ತೇನೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ರಾಹಿಂ ಅವರು ರಾಜಕೀಯದಲ್ಲಿ ಹಿರಿಯ ನಾಯಕರಾಗಿದ್ದಾರೆ.
ದೇವೇಗೌಡರ ಬಗ್ಗೆ, ಜೆಡಿಎಸ್ ಬಗ್ಗೆ ಪ್ರೀತಿ ಇದೆ. ನಾವು ಕದ್ದು ಮುಚ್ಚಿ ಯಾವುದನ್ನೂ ಮಾಡಿಲ್ಲ, ಇಬ್ರಾಹಿಂ ಬಂದರೆ ಗೌರವದ ಸ್ಥಾನ ಮಾನ ಕೊಡುತ್ತೇವೆ ಎಂದು ಹೇಳಿದ್ದಾರೆ. ಇಬ್ರಾಹಿಂ ಅವರು ದೇವೇಗೌಡರ ಏಳು-ಬೀಳಿನಲ್ಲಿ ಜೊತೆಯಾಗಿ ನಿಂತಿದ್ದರು, ವಿರೋಧ ಪಕ್ಷದ ನಾಯಕ ಸ್ಥಾನ ಸಿಗೋದಿದ್ದರೆ ಅಲ್ಲೇ ಇರಿ, ಉಪಯೋಗ ಮಾಡಿಕೊಳ್ಳಿ ಅಂತ ನಾನೇ ಹೇಳಿದ್ದೆ. ಜನತಾ ಪರಿವಾರದ ನಾಯಕರು ಎಲ್ಲರೂ ಸೆಟ್ಲ್ ಆಗಿದ್ದಾರೆ, ನಾನು ಇಬ್ರಾಹಿಂ ಅವರಿಗೂ ಕರೆ ಮಾಡಿ ಮಾತನಾಡಿದ್ದೇನೆ ಎಂದು ಹೆಚ್ಡಿಕೆ ಹೇಳಿದ್ದಾರೆ.