Select Your Language

Notifications

webdunia
webdunia
webdunia
webdunia

ಎಚ್‌ಡಿಕೆ ಮೊದ್ಲು ಗೆಲ್ಲುವ 100 ಅಭ್ಯರ್ಥಿಗಳನ್ನು ತೋರಿಸ್ಲಿ: ಜಮೀರ್ ಸವಾಲ್

ಎಚ್‌ಡಿಕೆ ಮೊದ್ಲು ಗೆಲ್ಲುವ 100 ಅಭ್ಯರ್ಥಿಗಳನ್ನು ತೋರಿಸ್ಲಿ: ಜಮೀರ್ ಸವಾಲ್
ಬೆಂಗಳೂರು , ಭಾನುವಾರ, 7 ಮೇ 2017 (12:01 IST)
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮೊದ್ಲು ಗೆಲ್ಲುವ 100 ಅಭ್ಯರ್ಥಿಗಳನ್ನು ತೋರಿಸ್ಲಿ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ಸವಾಲ್ ಹಾಕಿದ್ದಾರೆ.
 
ಕುಮಾರಸ್ವಾಮಿ ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳಲು ರೆಡಿಯಾಗಿದ್ದಾರೆ. ಈ ಬಾರಿ ಸಿಎಂ ಆಗುವ ಭ್ರಮೆಯಲ್ಲಿದ್ದಾರೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುತ್ತೇವೆ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
 
ಒಂದು ಕಡೆ ದೇವೇಗೌಡರು ಮೈತ್ರಿ ಕುರಿತು ಮಾತನಾಡುತ್ತಾರೆ. ಮತ್ತೊಂದೆಡೆ ಕುಮಾರಸ್ವಾಮಿ ಮೈತ್ರಿ ಎಂದರೆ ರಾಜಕೀಯ ನಿವೃತ್ತಿ ಎನ್ನುತ್ತಾರೆ. ಇದು ಜೆಡಿಎಸ್ ಪಕ್ಷದ ಗೊಂದಲವಲ್ಲ. ಇವರಿಬ್ಬರ ಗೊಂದಲವಾಗಿದೆ ಎಂದು ಲೇವಡಿ ಮಾಡಿದರು.
 
ರಾಹುಲ್ ಗಾಂಧಿ ಜತೆ ಮಾತನಾಡಿದ್ದೇನೆ. ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುತ್ತೇನೆ. ನಾನು ಕ್ಷೇತ್ರದ ಮಗ. ಜನತೆ ನನ್ನ ಕೈ ಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯಲ್ಲಿ ಭಿನ್ನಮತವಿಲ್ಲ, ಅಸಮಾಧಾನವಿಲ್ಲ: ಕಟ್ಟಾ