Daily Horoscope

Select Your Language

Notifications

webdunia
webdunia
webdunia
webdunia

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕುಮಾರಸ್ವಾಮಿ: ಇನ್ನು ಫುಲ್ ಆಕ್ಟಿವ್

HD Kumaraswamy
Photo Courtesy: Twitter
ಬೆಂಗಳೂರು: ಹೃದಯ ಸಂಬಂಧೀ ಚಿಕಿತ್ಸೆಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
 
ಕುಮಾರಸ್ವಾಮಿ ಮಾರ್ಚ್ 22 ರಂದು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಹೃದಯ ಸಂಬಂಧೀ ಚಿಕಿತ್ಸೆಗೊಳಗಾಗಿದ್ದರು. ಇದಾಗಿ ಎರಡು ದಿನಗಳ ಕಾಲ ಅವರನ್ನು ಆಸ್ಪತ್ರೆಯಲ್ಲೇ ಇರಿಸಲಾಗಿತ್ತು. ಇದೀಗ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ತಕ್ಷಣವೇ ಅವರು ಬೆಂಗಳೂರಿಗೆ ಬಂದಿಳಿದಿದ್ದಾರೆ.
 
ಬೆಂಗಳೂರಿಗೆ ಬಂದ ಮೇಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಅಭಿಮಾನಿಗಳು,ಹಿತೈಷಿಗಳ ಹಾರೈಕೆಯ ಫಲ ನಾನು ಗುಣಮುಖನಾಗಿ ಬಂದಿದ್ದೇನೆ. ಸಾಯಿ ಬಾಬ ಬಂದು ಆಪರೇಷನ್ ಮಾಡಿದ್ರು ಎಂದು ಸ್ವತಃ ವೈದ್ಯರೇ ಹೇಳಿದ್ದಾರೆ. ಇನ್ನು ಮೂರು-ನಾಲ್ಕು ದಿನ ವಿಶ್ರಾಂತಿ ಪಡೆಯಲಿದ್ದೇನೆ ಎಂದಿದ್ದಾರೆ.
 
ಚೆನ್ನೈ ವಿಮಾನವೇರುವ ಮುನ್ನ ಕುಮಾರಸ್ವಾಮಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ಬಳಿಕ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದರು. ಅದರಂತೆ ಈಗ ಮೂರ್ನಾಲ್ಕು ದಿನಗಳ ಕಾಲ ವಿಶ್ರಾಂತಿ ಪಡೆದ ಬಳಿಕ ನನ್ನ ಕೈಲಾದ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಲ್ಲಿ ಸಿಎಂ ಕೇಜ್ರಿವಾಲ್ ಗೆ ವಿಶೇಷ ಆಹಾರ, ಸಕ್ಕರೆ ಕಾಯಿಲೆ ಹೆಚ್ಚಳ