ಸಿಡಿದ ಮೊಮ್ಮಗನಿಗೆ ಬುದ್ಧಿ ಹೇಳಿದ ದೇವೇಗೌಡರು

Webdunia
ಶುಕ್ರವಾರ, 13 ಅಕ್ಟೋಬರ್ 2017 (09:16 IST)
ಬೆಂಗಳೂರು: ಜೆಡಿಎಸ್ ಯುವ ನಾಯಕ, ಎಚ್ ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಮತ್ತೆ ಪಕ್ಷದ ವಿರುದ್ಧವೇ ಹೇಳಿಕೆ ನೀಡಿದ್ದರು. ಇದೀಗ ತಾತ ಎಚ್ ಡಿ ದೇವೇಗೌಡ ಮತ್ತೊಮ್ಮೆ ಮೊಮ್ಮಗನಿಗೆ ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ.

 
ಇತ್ತೀಚೆಗೆಷ್ಟೇ ಪ್ರಜ್ವಲ್, ಜೆಡಿಎಸ್ ನಲ್ಲಿ ಬಕೆಟ್ ಸಂಸ್ಕೃತಿ ಇದೆ ಎಂದು ವಿವಾದವೆಬ್ಬಿಸಿದ್ದರು. ಇದರಿಂದದ ನೊಂದಿದ್ದ ಗೌಡರು ಮೊಮ್ಮಗನಿಗೆ ಕರೆ ಮಾಡಿ ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ.

ಮುಂಬರುವ ಚುನಾವಣೆಯಲ್ಲಿ ಎಚ್ ಡಿ ರೇವಣ್ಣ ಮತ್ತು ಕುಮಾರಸ್ವಾಮಿ ಮಾತ್ರ ಗೌಡರ ಕುಟುಂಬದಿಂದ ಸ್ಪರ್ಧಿಸುವುದಾಗಿ ದೇವೇಗೌಡರು ಹೇಳಿದ್ದರು. ಇದೀಗ ಹುಣಸೂರಿನಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಜ್ವಲ್ ಸಾರ್ವಜನಿಕವಾಗಿ ತಮ್ಮ ನಿರಾಸೆಯನ್ನು ಪಕ್ಷ ವಿರೋಧಿ ಹೇಳಿಕೆಗಳ ಮೂಲಕ ಹೊರಹಾಕುತ್ತಿದ್ದಾರೆ ಎಂದು ಇತರ ನಾಯಕರು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ದೊಡ್ಡ ಗೌಡರು ಮೊಮ್ಮಗನಿಗೆ ಈ ರೀತಿ ವರ್ತನೆ ಸರಿಯಲ್ಲ ಎಂದು ಮತ್ತೊಮ್ಮೆ ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚೀನಾ, ಭಾರತ ನಡುವೆ ನೇರ ವಿಮಾನ ಹಾರಾಟ ಶುರು

ಕರ್ನೂಲ್ ಬಸ್ ದುರಂತ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್‌

ನಮ್ಮನ್ನು ಟೀಕಿಸುತ್ತಾರೆಂದು ಸುಮ್ಮನೇ ಬಿಡಲು ಸಾಧ್ಯವಿಲ್ಲ: ಮಜುಂದೂರ್ ಬಗ್ಗೆ ಡಿಕೆಶಿ ಹೀಗಂದ್ರು

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸ್ಕೆಚ್‌ ಹಾಕಿದ್ದ ಏಜೆಂಟ್ ನಿಗೂಢ ಸಾವು, ಏನಿದು

ನವೆಂಬರ್ ಕ್ರಾಂತಿ ಸದ್ದು ಬೆನ್ನಲ್ಲೇ ಚರ್ಚೆಗೆ ಕಾರಣವಾದ ಲಕ್ಷ್ಮಣ ಸವದಿ ಹೇಳಿಕೆ

ಮುಂದಿನ ಸುದ್ದಿ
Show comments