Select Your Language

Notifications

webdunia
webdunia
webdunia
webdunia

ಪ್ಲಾಟ್‌ಫಾರ್ಮ್‌ನಲ್ಲಿ ನಿಂತವರ ಮೇಲೆಯೇ ಎರಗಿದ ಬಸ್‌, ಎದೆ ಝಲ್ಲೆನಿಸುತ್ತದೆ, Video

Bus accident
Photo Credit X
ಹಾವೇರಿ: ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ಗೆ ಬಸ್ ನುಗ್ಗಿದ ಪರಿಣಾಮ ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಇಂದು ಬೆಂಗ್ಗೆ ನಡೆದಿದೆ. ಮೃತ ಮಗುವನ್ನು ಹಜರತ್ ಅಲಿ ಇಸ್ಮಾಯಿಲ್ ರಾಯಚೂರು ಎಂದು ಗುರುತಿಸಲಾಗಿದೆ.

ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ನೋಡುವಾಗ ಎದೆ ಝಲ್ಲೆನಿಸುತ್ತದೆ.  ಮೂವರು ಗಾಯಗೊಂಡಿದ್ದು, ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಾವೇರಿ ಸಂಚಾರ ಠಾಣೆ ಪೊಲೀಸರು ತಿಳಿಸಿದರು.

ಸವಣೂರಿನ ಹಜರತ್ ಅಲಿ ಹಾಗೂ ಪೋಷಕರು, ಹಾವೇರಿಗೆ ಬಂದಿದ್ದರು. ವಾಪಸು ತಮ್ಮೂರಿಗೆ ಹೋಗಲು ಬಸ್‌ಗಾಗಿ ಕಾಯುತ್ತ ನಿಂತಿದ್ದಾಗ  ಹಾವೇರಿ–ಲಕ್ಷ್ಮೇಶ್ವರ ಮಾರ್ಗದ ಬಸ್, ಅತೀ ವೇಗದಲ್ಲಿ ಪ್ಲಾಟ್‌ಫಾರ್ಮ್‌ಗೆ ನುಗ್ಗಿತ್ತು ಎಂದರು.

‘ಹಜರತ್ ಅಲಿ ಸೇರಿದಂತೆ ಬಂಕಾಪುರದ ವಾಸುದೇವ ಗುರುನಾಥಪ್ಪ ಉತಳೇಕರ್ (44), ಅವರ ಮಗಳು ಹರ್ಷಾ ಉತಳೇಕರ್ (6), ಕಾವ್ಯಾಂಜಲಿ ವಿಷ್ಣು ಉತಳೇಕರ್ (39) ಹಾಗೂ ಸವಣೂರಿನ ಆರ್ಬಜಖಾನ್ ಸೌದಾಗರ (13) ಅವರಿಗೂ ಬಸ್ ಡಿಕ್ಕಿ ಹೊಡೆದಿದೆ. 
ಅಪಘಾತಕ್ಕೆ ಕಾರಣವಾದ ಚಾಲಕ ಕೋಲಾರ ಜಿಲ್ಲೆಯ ಎನ್. ಕೊಟ್ಟೂರು ಗ್ರಾಮದ ಮಂಜುನಾಥ್ ಆರ್. ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಹಿಂದ ಹೆಸರಲ್ಲಿ ಪ್ರಚಾರ ಪಡೆದ ಸಿದ್ದರಾಮಯ್ಯ ಅವರಿಗಾಗಿ ಏನೂ ಮಾಡಿಲ್ಲ: ಸುನಿಲ್ ಕುಮಾರ್‌