ಮಂಗಳೂರು : ಧರ್ಮದ ವಿಚಾರದಲ್ಲಿ ದ್ವೇಷ, ನೋವುಂಟು ಮಾಡಬಾರದು. ಪ್ರೀತಿ ಸಹೋದರತೆಯನ್ನು ಬೆಳೆಸಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.
ಧರ್ಮಗಳ ಬಗ್ಗೆ ಅವಹೇಳನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ಧರ್ಮಕ್ಕೂ ಅದರದ್ದೇ ಆದ ಮಹತ್ವವಿದೆ, ಗೌರವವಿದೆ. ಎಲ್ಲಾ ಧರ್ಮವೂ ಪ್ರೀತಿ, ವಿಶ್ವಾಸ, ಸಹೋದರತೆಯನ್ನು ತಿಳಿಸುತ್ತದೆ.
ಇದನ್ನು ಹೊರತುಪಡಿಸಿ ದ್ವೇಷವನ್ನು ಎಲ್ಲಿಯೂ ತಿಳಿಸುವುದಿಲ್ಲ. ಎಲ್ಲಾ ಧರ್ಮಗಳು ಸಮಾಜವನ್ನು ಒಗ್ಗಟ್ಟು ಮಾಡುವ ಸಂದೇಶ ಕೊಡುತ್ತೆ. ಬಿಕ್ಕಟ್ಟು ಮಾಡುವ ಸಂದೇಶ ಯಾವ ಧರ್ಮವೂ ನೀಡಲ್ಲ ಎಂದರು.
ಮಾನವೀಯತೆ, ಕರುಣೆ, ಪ್ರೀತಿ ವಿಶ್ವಾಸ, ಸಹೋದರತೆ, ಕ್ಷಮೆ ಇದಕ್ಕೆ ಸೀಮಿತವಾಗಿರಬೇಕು. ನೆಮ್ಮದಿಯ ಜೀವನ ನಡೆಸುವ ಅವಕಾಶ ಎಲ್ಲಾ ಧರ್ಮ ಕೊಡುತ್ತೆ. ಯಾರು ಏನು ಹೇಳಿಕೆ ನೀಡಿದ್ದಾರೆಂದು ಗೊತ್ತಿಲ್ಲ. ನಾವು ನಮ್ಮ ನಮ್ಮ ಧರ್ಮವನ್ನು ಅಚ್ಚುಕಟ್ಟಾಗಿ ಆಚರಿಸಿ ಇನ್ನಿತರ ಧರ್ಮವನ್ನು ಗೌರವಿಸಬೇಕು ಎಂದು ಖಾದರ್ ತಿಳಿಸಿದರು.